ರುಕ್ಮಾನಾಯ್ಕ್ ಸೇವೆ ಶ್ಲಾಘನೀಯ: ಡಾ: ಮುರಲೀ

ಮಂಗಳೂರು, ಸೆ.28: ಗೃಹರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಬೋಧಕರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಇತ್ತೀಚೆಗೆ ನಿಧನರಾದ ರುಕ್ಮಾನಾಯ್ಕ್ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಇತ್ತೀಚೆಗೆ ಜಿಲ್ಲಾ ಗೃಹರಕ್ಷಕ ದಳದ ಕೇಂದ್ರ ಕಚೇರಿಯಲ್ಲಿ ನಡೆಸಲಾಯಿತು.
ಮೃತರು ಹಲವಾರು ಮಂದಿ ಪೊಲೀಸ್ ಶಿಬಿರಾರ್ಥಿಗಳಿಗೆ ಹಾಗೂ ಗೃಹರಕ್ಷಕರಿಗೆ ತರಬೇತುದಾರರಾಗಿ ಹಾಗೂ ಬೋಧಕರಾಗಿ ಗೃಹರಕ್ಷಕ ದಳಕ್ಕೆ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಈಗಿನ ಯುವಜನರಿಗೆ ಆದರ್ಶನೀಯ ವ್ಯಕ್ತಿಯಾಗಿದ್ದರು ಎಂದು ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು ಹೇಳಿದರು.
ಡೆಪ್ಯುಟಿ ಕಮಾಂಡೆಂಟ್ ರಮೇಶ್ ಮತ್ತು ಕಚೇರಿ ಸಿಬ್ಬಂದಿ ಅನಿತಾ, ಶ್ಯಾಮಲಾ ಶೆಟ್ಟಿ, ಸ್ಟಾಫ್ ಆಫೀಸರ್ ಉಷಾ ಮತ್ತು ಎಲ್ಲಾ 14 ಘಟಕಗಳ ಘಟಕಾಧಿಕಾರಿಗಳಾದ ಮನ್ಸೂರ್, ಜಯಂತ್ ಶೆಟ್ಟಿ, ನಾರಾಯಣ, ವಿಶ್ವನಾಥ್, ಬೋಜ, ಗೋಪಾಲ, ಜಯಾನಂದ, ಸಂತೋಷ್, ರಾಮಣ್ಣ ಆಚಾರ್, ಅಭಿಮನ್ಯು ರೈ, ಹರೀಶ್ ಆಚಾರ್, ರಮೇಶ್, ಸಂಜೀವ ಪೂಜಾರಿ ಮತ್ತು ಹಿರಿಯ ಗೃಹರಕ್ಷಕ ಸುರೇಶ್ ಶೇಠ್ ಭಾಗವಹಿಸಿದ್ದರು.





