ಉಡುಪಿ: ಸೇತುವೆಯಿಂದ ನದಿಗೆ ಹಾರಿದ ಯುವತಿ

ಉಡುಪಿ, ಸೆ.28: ಯುವತಿಯೊಬ್ಬಳು ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂತೆಕಟ್ಟೆ ಸಮೀಪದ ಕಲ್ಯಾಣಪುರ ಸೇತುವೆಯಿಂದ ಸ್ವರ್ಣ ನದಿಗೆ ಹಾರಿರುವ ಬಗ್ಗೆ ವರದಿಯಾಗಿದೆ.
ನದಿಗೆ ಹಾರಿರುವ ಯುವತಿಯನ್ನು ಸಂತೆಕಟ್ಟೆ ಕಲ್ಯಾಣಪುರ ಲಕ್ಷ್ಮೀನಗರದ ಚಂದ್ರಶೇಖರ್‌ಎಂಬವರ ಮಗಳು ಚೈತ್ರಾ(18) ಎಂದು ಗುರುತಿಸಲಾಗಿದೆ.
ಈಕೆಯ ಚಪ್ಪಲಿ ಹಾಗೂ ಬ್ಯಾಗ್ ಸೇತುವೆ ಮೇಲೆ ಕಂಡುಬಂದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಈಕೆ, ನಂತರ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಆಗಮಿಸಿರುವ ಬ್ರಹ್ಮಾವರ ಪೊಲೀಸರು ಹಾಗೂ ಸ್ಥಳೀಯರು ಆಕೆಗಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





