ದುರ್ಗಾ ದೇವಳದಲ್ಲಿ ಕಳ್ಳತನ: 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಹೆಬ್ರಿ, ಸೆ.28: ಕಬ್ಬಿನಾಲೆ ಗ್ರಾಮದ ದುರ್ಗಾ ಎಂಬಲ್ಲಿರುವ ಶ್ರೀಅನ್ನ ಪೂರ್ಣೇಶ್ವರಿ ದೇವಸ್ಥಾನಕ್ಕೆ ಸೆ.26ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ದೇವಿಯ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ.
ದೇವಸ್ಥಾನದ ಅರ್ಚಕ ಸತೀಶ ಬಾಯರಿ ಸೆ.26ರಂದು ಸಂಜೆ 7ಗಂಟೆಗೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಸೆ.27ರಂದು ಬೆಳಿಗ್ಗೆ 7ಗಂಟೆಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಆಗಮಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನದ ಗರ್ಭ ಗುಡಿಯ ಹೊರ ಹಾಗೂ ಒಳ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಚಿನ್ನದ ಕವಚ, ಎರಡು ಚಿನ್ನದ ಲಕ್ಷ್ಮೀ ಸರ, ಎರಡು ಚಿನ್ನದ ಸಣ್ಣ ಕರಿಮಣಿ ಸರ, ಚಿನ್ನದ ನೆಕ್ಲೇಸ್, ಚಿನ್ನದ ಕವಚ ಇರುವ ಅಭಿಷೇಕದ ಶಂಖ ಸೇರಿ ಒಟ್ಟು 229 ಗ್ರಾಂ ತೂಕದ 6ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





