ಉ.ಕ. ಜಿಲ್ಲೆಯಲ್ಲಿ ಏತ ನೀರಾವರಿ ಅನುಷ್ಠಾನಗೊಳಿಸಿದ ಧುರೀಣರಿಗೆ ಸನ್ಮಾನ

ಅಂಕೋಲಾ, ಸೆ.28: ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಏತ ನೀರಾವರಿಯನ್ನು 50 ವರ್ಷಗಳ ಹಿಂದೆಯೇ ಅನುಷ್ಠಾನಗೊಳಿಸಿ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿದ್ದ ಶಿರಗುಂಜಿಯ ಹಿರಿಯ ನಾಗರಿಕ ಮೋನು ಬೊಮ್ಮಯ್ಯ ನಾಯಕ ಮತ್ತು ಗ್ರಾಪಂನ ಪ್ರಥಮ ಮಹಿಳಾ ಜನಪ್ರತಿನಿಧಿಯಾಗಿದ್ದ ಕಮಲಾ ಬೀರಣ್ಣ ನಾಯಕ ಮತ್ತು ಜಿಲ್ಲಾ ಪಂಚಾಯತ್‌ಸದಸ್ಯರಾದ ಜಗದೀಶ ನಾಯಕ ಮೊಗಟಾ, ತಾಪಂ ಸದಸ್ಯ ವಿಲ್ಸನ್ ಡಿಕೋಸ್ತಾ, ತುಳಸಿದಾಸ ಕಾಮತ, ಮಂಜೇಶ್ವರ ನಾಯಕ, ಅನಂತ ಭಟ್ ಮತ್ತು ಅಧ್ಯಕ್ಷ ಶ್ರೀಧರ ನಾಯ್ಕ, ಪಿಡಿಒ ನೀಲಕಂಠ ವಸಂತ ನಾಯಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
Next Story





