ವರ್ಲ್ಡ್ ಕಪ್ ಕಬಡ್ಡಿಗೆ ಪಾಕ್‌ಗೆ ಆಹ್ವಾನ ನೀಡಿದ ಪಂಜಾಬ್

ಚಂಡೀಗಡ, ಸೆ.28: ಉರಿ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತನ್ನ ನಿಲುವನ್ನು ಬಿಗಿಗೊಳಿಸಿ, ಪಾಕಿಸ್ತಾನವನ್ನು ಮಣಿಸಲು ಎಲ್ಲ ಪ್ರಯತ್ನ ಮುಂದುವರಿಸಿರುವಾಗಲೇ ಪಂಜಾಬ್ ಮುಂಬರುವ ಕಬಡ್ಡಿ ವಿಶ್ವಕಪ್‌ಗೆ ಪಾಕಿಸ್ತಾನ ದ ಕಬಡ್ಡಿ ತಂಡಕ್ಕೆ ಆಹ್ವಾನ ನೀಡಿದೆ.
ನವೆಂಬರ್‌ನಲ್ಲಿ ನಡೆಯಲಿರುವ ಆರನೆ ಆವೃತ್ತಿಯ ವಿಶ್ವಕಪ್ ಕಬಡ್ಡಿಗೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿರುವುದಾಗಿ ಪಂಜಾಬ್ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸಿಕಂದರ್ ಸಿಂಗ್ ಮಾಲುಕಾ ಮಂಗಳವಾರ ತಿಳಿಸಿದ್ದಾರೆ.
‘‘ ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗಿದ್ದರೂ, ಭಾರತ ಸರಕಾರದಿಂದ ಪಾಕ್‌ನ ಆಟಗಾರರಿಗೆ ವೀಸಾ ದೊರೆಯುವ ಸಾಧ್ಯತೆ ಇಲ್ಲ’’ ಎಂದು ಸಿಕಂದರ್ ಸಿಂಗ್ ಮಾಲುಕಾ ಹೇಳಿದ್ದಾರೆ. ಮಾಲುಕಾ ಅವರು ಪಂಜಾಬ್‌ನ ಎಸ್‌ಎಡಿ -ಬಿಜೆಪಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದಾರೆ.
ಕೇಂದ್ರ ಸರಕಾರ ಪಾಕಿಸ್ತಾನ ತಂಡದ ಆಟಗಾರರಿಗೆ ವೀಸಾ ನೀಡುತ್ತದೋ ಅಥವಾ ಇಲವೋ ? ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಪಾಕಿಸ್ತಾನದ ಆಟಗಾರರಿಗೆ ವೀಸಾ ನಿರಾಕರಿಸಲ್ಪಟ್ಟರೆ ಮೊದಲ ಬಾರಿ ಪಾಕಿಸ್ತಾನ ಕಬಡ್ಡಿ ವಿಶ್ವಕಪ್‌ನಿಂದ ಹೊರಗುಳಿಯಲಿದೆ ಎಂದು ಹೇಳಿದ್ದಾರೆ .
ನವೆಂಬರ್ 3ರಿಂದ 17ರ ತನಕ ನಡೆಯಲಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಕೆನಡಾ, ಅಮೆರಿಕ, ಆಸ್ಟ್ರೇಲಿಯ, ತಾಂಝೆನಿಯಾ, ಇಂಗ್ಲೆಂಡ್, ಇರಾನ್, ನ್ಯೂಝಿಲೆಂಡ್, ಸಿರ್ರಾ ಲೆಯೊನ್,ಸ್ಪೇನ್, ಅರ್ಜೆಂಟೀನ ತಂಡಗಳು ಭಾಗವಹಿಸಲಿದೆ.2015ರಲ್ಲಿ ಪಂಜಾಬ್‌ನಲ್ಲಿ ನಡೆುಬೇಕಾಗಿದ್ದ ಕಬಡ್ಡಿ ವಿಶ್ವಕಪ್‌ನ್ನು ವಿವಿಧ ಕಾರಣಗಳಿಂದಾಗಿ ರದ್ಧುಗೊಳಿಸಲಾಗಿತ್ತು





