ಕೆಪಿಎಲ್: ಬೆಳಗಾವಿಗೆ ಭರ್ಜರಿ ಜಯ

ಹುಬ್ಬಳ್ಳಿ, ಸೆ.28: ಮಾಯಾಂಕ್ ಅಗರವಾಲ್(ಔಟಾಗದೆ 66) ಅರ್ಧಶತಕದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ರಾಕ್‌ಸ್ಟಾರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿದೆ.
ಇಲ್ಲಿ ನಡೆಯುತ್ತಿರುವ ಐದನೆ ಆವೃತ್ತಿಯ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 23ನೆ ಪಂದ್ಯದಲ್ಲಿ ಗೆಲ್ಲಲು ಸುಲಭ ಸವಾಲು ಪಡೆದ ಬೆಳಗಾವಿ ತಂಡಕ್ಕೆ ಅಗರವಾಲ್(ಔಟಾಗದೆ 66 ರನ್, 31 ಎಸೆತ, 3 ಬೌಂಡರಿ, 7 ಸಿಕ್ಸರ್) ಮತ್ತೊಮ್ಮೆ ಆಸರೆಯಾದರು. 8 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಲು ನೆರವಾದರು.
ಇದಕ್ಕೆ ಮೊದಲು ಟಾಸ್ ಜಯಿಸಿದ ಬೆಳಗಾವಿ ತಂಡ ದುರ್ಬಲ ತಂಡ ರಾಕ್‌ಸ್ಟಾರ್ಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿತು. ಎಸ್. ಭಾರ ದ್ವ್ವಾಜ್(3-12) ನೇತೃತ್ವದ ಬೆಳಗಾವಿಯ ಶಿಸ್ತುಬದ್ಧ ದಾಳಿಗೆ ನಿರುತ್ತರವಾದ ರಾಕ್‌ಸ್ಟಾರ್ಸ್ 18 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 87 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಕ್‌ಸ್ಟಾರ್ಸ್ ತಂಡದ ಪರ ಅಗ್ರ ಕ್ರಮಾಂಕದ ರಾಜೀವ್(24) ಅಗ್ರ ಸ್ಕೋರರ್ ಎನಿಸಿಕೊಂಡರೆ, ಉಳಿದವರು ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದರು.
ಬೆಳಗಾವಿಯ ಬೌಲರ್‌ಗಳಾದ ಶಿಂಧೆ(2-32), ದುಬೆ(2-16) ಹಾಗೂ ಸಿಕೆ ಅಕ್ಷಯ್(2-9) ತಲಾ ಎರಡು ವಿಕೆಟ್ ಕಬಳಿಸಿ ರಾಕ್‌ಸ್ಟಾರ್ಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಬೆಳಗಾವಿಗೆ ಭರ್ಜರಿ ಗೆಲುವು ತಂದುಕೊಟ್ಟ ಅಗರವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ರಾಕ್‌ಸ್ಟಾರ್ಸ್: 18 ಓವರ್‌ಗಳಲ್ಲಿ 87/9
(ರಾಜೀವ್ 24, ರಾಹುಲ್ ಗೌಡ 19, ಭಾರದ್ವಾಜ್ 3-12, ಅಕ್ಷಯ್ 2-9, ದುಬೆ 2-16, ಶಿಂಧೆ 2-32)
ಬೆಳಗಾವಿ ಪ್ಯಾಂಥರ್ಸ್: 8 ಓವರ್‌ಗಳಲ್ಲಿ 91/1
(ಅಗರವಾಲ್ ಔಟಾಗದೆ 66, ಕೆ. ಅಬ್ಬಾಸ್ ಔಟಾಗದೆ 19, ಪ್ರದೀಪ್ 1-14)
ಮೈಸೂರು ವಾರಿಯರ್ಸ್‌ಗೆ ಸುಲಭ ಜಯ
ಹುಬ್ಬಳ್ಳಿ, ಸೆ.28: ಕೆಪಿಎಲ್‌ನ 24ನೆ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತು.
ಇಲ್ಲಿನ ಕೆಎಸ್‌ಸಿಎ ರಾಜ್‌ನಗರ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕೆಪಿಎಲ್ ಪಂದ್ಯದಲ್ಲಿ ಗೆಲ್ಲಲು 170 ರನ್ ಗುರಿ ಪಡೆದಿದ್ದ ಮೈಸೂರು 19ನೆ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಅರ್ಜುನ್ ಹೊಯ್ಸಳ(58), ಅಕ್ಷಯ್(ಔಟಾಗದೆ 50) ಹಾಗೂ ನಾಯಕ ಮನೀಶ್ ಪಾಂಡೆ(ಔಟಾಗದೆ 25) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆತಿಥೇಯ ಇದಕ್ಕೆ ಮೊದಲು ತಂಡ ಹುಬ್ಬಳ್ಳಿ ತಂಡ 19.5 ಓವರ್‌ಗಳಲ್ಲಿ 169 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿವಿ ಕುಮಾರ್(4-40), ಜೆ. ಸುಚಿತ್(2-20) ಹಾಗೂ ಗೌತಮ್(2-23) ಹುಬ್ಬಳ್ಳಿಯನ್ನು 169 ರನ್‌ಗೆ ಕಟ್ಟಿ ಹಾಕಿದರು. ಹುಬ್ಬಳ್ಳಿಯ ಪರ ಆರಂಭಿಕ ಆಟಗಾರ ಮುಹಮ್ಮದ್ ತಾಹ(33), ನಾಯಕ ಕುನಾಲ್ ಕಪೂರ್(29), ಮಂಜೇಶ್ ರೆಡ್ಡಿ(22), ಸರ್ಪರಾಝ್ ಅಶ್ರಫ್(22) ಉಪಯುಕ್ತ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್
ಹುಬ್ಬಳ್ಳಿ ಟೈಗರ್ಸ್: 19.5 ಓವರ್‌ಗಳಲ್ಲಿ 169 ರನ್‌ಗೆ ಆಲೌಟ್
(ಮುಹಮ್ಮದ್ ತಾಹ 33, ಕುನಾಲ್ ಕಪೂರ್ 29, ವಿವಿ ಕುಮಾರ್ 4-40, ಸುಚಿತ್ 2-20, ಗೌತಮ್ 2-23)
ಮೈಸೂರು: 19 ಓವರ್‌ಗಳಲ್ಲಿ 172/2
(ಅರ್ಜುನ್ 58, ಅಕ್ಷಯ್ 50, ಮನೀಶ್ ಪಾಂಡೆ ಔಟಾಗದೆ 25)







