ಈಡನ್‌ಗಾರ್ಡನ್ಸ್ ಭಾರತದ ಮೂರನೆ ಅತ್ಯಂತ ಯಶಸ್ವಿ ಮೈದಾನ
ಹೊಸದಿಲ್ಲಿ, ಸೆ.28: ಭಾರತ ಹಾಗೂ ನ್ಯೂಝಿಲೆಂಡ್‌ನ ನಡುವೆ ಶುಕ್ರವಾರ ನಡೆಯಲಿರುವ ಎರಡನೆ ಟೆಸ್ಟ್‌ನ ಆತಿಥ್ಯವಹಿಸಿರುವ ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂ ಭಾರತೀಯರ ಪಾಲಿಗೆ ಮೂರನೆ ಅತ್ಯಂತ ಯಶಸ್ವಿ ಮೈದಾನವಾಗಿ ಗುರುತಿಸಿಕೊಂಡಿದೆ.
1934ರ ಬಳಿಕ ಈಡನ್‌ಗಾರ್ಡನ್ಸ್‌ನಲ್ಲಿ 39 ಪಂದ್ಯಗಳನ್ನು ಆಡಿರುವ ಭಾರತ ಕ್ರಿಕೆಟ್ ತಂಡ 11ರಲ್ಲಿ ಜಯ, 9ರಲ್ಲಿ ಸೋಲು ಹಾಗೂ 19 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.
ಹೊಸದಿಲ್ಲಿಯ ಫಿರೋಝ್ ಷಾ ಕೋಟಾ ಹಾಗೂ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನ ಬಳಿಕ ಈಡನ್‌ಗಾರ್ಡನ್ಸ್ ಭಾರತದ ಪಾಲಿಗೆ ಮೂರನೆ ಯಶಸ್ವಿ ಟೆಸ್ಟ್ ತಾಣವಾಗಿದೆ.
ಹೊಸದಿಲ್ಲಿ ಹಾಗೂ ಚೆನ್ನೈ ಸ್ಟೇಡಿಯಂಗಳಲ್ಲಿ ಭಾರತ ತಲಾ 13 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ನ್ಯೂಝಿಲೆಂಡ್‌ನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡರೆ, ಕೋಲ್ಕತಾದಲ್ಲಿ 13ನೆ ಗೆಲುವು ಸಾಧಿಸಿದಂತಾಗುತ್ತದೆ. ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಅತ್ಯಂತ ಹೆಚ್ಚು ಪಂದ್ಯಗಳನ್ನು (19)ಡ್ರಾ ಮಾಡಿಕೊಂಡಿದೆ. ಕೋಟ್ಲಾದಲ್ಲಿ ಎರಡನೆ ಗರಿಷ್ಠ ಸಂಖ್ಯೆ(14)ಯ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಭಾರತ 2013ರಲ್ಲಿ ಕೊನೆಯ ಬಾರಿ ಕೋಲ್ಕತಾದಲ್ಲಿ ಟೆಸ್ಟ್ ಪಂದ್ಯ ಆಡಿತ್ತು. ಆ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಭಾರತ ತಂಡ ವೆಸ್ಟ್‌ಇಂಡೀಸ್ ತಂಡವನ್ನು 51 ರನ್‌ಗಳ ಅಂತರದಿಂದ ಸೋಲಿಸಿತ್ತು. 2012ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಮಣಿಸಿತ್ತು.
ಭಾರತ ಈಡನ್‌ನಲ್ಲಿ 1999ರ ಫೆಬ್ರವರಿಯಲ್ಲಿ ಟೆಸ್ಟ್ ಪಂದ್ಯವನ್ನು ಸೋತಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ 46 ರನ್‌ಗಳ ಅಂತರದ ಜಯ ಸಾಧಿಸಿತ್ತು.







