ಮಂಗಳೂರು ವಿವಿ ಕ್ಯಾಂಪಸ್, ಎಸ್‌ಡಿಎಂ ಕಾಲೇಜು ಚಾಂಪಿಯನ್ಸ್
ಮಂಗಳೂರು ವಿವಿ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆ,

ಬಾರಕೂರು, ಸೆ.28: ಬಾರಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿವಿ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್-ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಮಂಗಳೂರಿನ ವಿವಿ ಕ್ಯಾಂಪಸ್ ಕಾಲೇಜು ಹಾಗೂ ಎಸ್‌ಡಿಎಂ ಕಾಲೇಜು ತಂಡಗಳು ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿವೆ.
ಸ್ಪರ್ಧೆಯನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ವಸಂತರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್, ಬಾಲಕೃಷ್ಣ ಹೆಗ್ಡೆ ಹಾಗೂ ಹರಿದಾಸ್ ಕೂಳೂರ್ ಉಪಸ್ಥಿತರಿದ್ದರು. ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಣ ತಜ್ಞ ಮಂಜುನಾಥ್ ಸೋಮಯಾಜಿ, ಪ್ರಶಾಂತ್ ಮೊಳಹಳ್ಳಿ ಹಾಗೂ ಶಜಿತ್ ಶೆಟ್ಟಿ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲ ವಸಂತರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ದೈಹಿಕ ಶಿಕ್ಷಣ ನಿರ್ದೇಶಕ ಜಯಭಾರತಿ ಎ ಹಾಗೂ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕಿರಣ್ ಉಪಸ್ಥಿತರಿದ್ದರು.
ಪುರುಷರ ವಿಭಾಗದಲ್ಲಿ 12 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 17 ತಂಡಗಳು ಪಾಲ್ಗೊಂಡಿದ್ದವು.
ಸ್ಪರ್ಧೆಯ ಫಲಿತಾಂಶ
ಪುರುಷರ ವಿಭಾಗ: ಸಮಗ್ರ ತಂಡ ಪ್ರಶಸ್ತಿ ಯುನಿವರ್ಸಿಟಿ ಕ್ಯಾಂಪಸ್, ಮಂಗಳೂರು. ರನ್ನರ್‌ಅಪ್: ಆಳ್ವಾಸ್ ಕಾಲೇಜು ಮೂಡುಬಿದಿರೆ. ತೃತೀಯ: ಧವಳಾ ಕಾಲೇಜು ಮೂಡುಬಿದಿರೆ. ಚತುರ್ಥ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ. ವೈಯಕ್ತಿಕ ಪ್ರಶಸ್ತಿ: ಕುಶ, ಯುನಿವರ್ಸಿಟಿ ಕ್ಯಾಂಪಸ್ ಮಂಗಳೂರು.
ಮಹಿಳೆಯರ ವಿಭಾಗ: ಸಮಗ್ರ ತಂಡ ಪ್ರಶಸ್ತಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮಂಗಳೂರು. ರನ್ನರ್‌ಅಪ್: ಯುನಿವರ್ಸಿಟಿ ಕ್ಯಾಂಪಸ್, ಮಂಗಳೂರು. ತೃತೀಯ: ರುಕ್ಮಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಕಾಲೇಜು, ಬಾರಕೂರು. ಚತುರ್ಥ: ಸರಕಾರ ಪ್ರಥಮ ದರ್ಜೆ ಕಾಲೇಜು ಸುಳ್ಯ. ವೈಯಕ್ತಿಕ ಪ್ರಶಸ್ತಿ: ಶಕಿಲಾ ಅಭ್ಯಂಕರ್.





