ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಅಷ್ಟಾವಧಾನ
ಕುಂದಾಪುರ, ಸೆ.28: ನಗರದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ‘ಅಷ್ಟಾವಧಾನ’ ಕಾರ್ಯಕ್ರಮ ಬುಧವಾರ ಜರಗಿತು. ಅವಧಾನಿಗಳಾಗಿ ಗುಂಡಿಬೈಲು ಸುಬ್ರಮಣ್ಯ ಭಟ್, ನಿಷೇಧಾಕ್ಷರಿಯಾಗಿ ಅವಧಾನಿ ವಿದ್ವಾನ್ ಮಹೇಶ್ ಭಟ್ ಹಾರ್ಯಾಡಿ, ಸಮಸ್ಯಾ ಪೂರ್ತಿಯಾಗಿ ವಿದ್ವಾನ್ ವಿನಾಯಕ ಭಟ್ ಒಡ್ಲಮನೆ, ದತ್ತಪದಿಯಾಗಿ ಅವಧಾನಿ ಸೂರ್ಯ ಹೆಬ್ಬಾರ್ ಶೃಂಗೇರಿ, ಉದ್ದಿಷ್ಟಾಕ್ಷರಿಯಾಗಿ ವಿದ್ವಾನ್ ಎಚ್. ನಾರಾಯಣ ಮೂರ್ತಿ ಸಾಲಿಗ್ರಾಮ, ಅಪ್ರಸ್ತುತ ಪ್ರಸಂಗಕಾರರಾಗಿ ವಿದ್ವಾನ್ ಅಮೃತೇಶ್ ಡಿ.ಎಸ್. ಉಡುಪಿ, ಆಶು ಕವಿತೆಗಾರರಾಗಿ ಚಂದ್ರಶೇಖರ ಕೆದ್ಲಾಯ ಹಾರ್ಯಾಡಿ, ಸಂಖ್ಯಾಬಂಧಕಾರರಾಗಿ ವಿದ್ವಾನ್ ಭರತ್ ಐತಾಳ್ ಉಳ್ಳೂರು, ಯಕ್ಷ ಕಾವ್ಯವಾಚನಕಾರರಾಗಿ ಸುಜಯೀಂದ್ರ ಹಂದೆ ಕೋಟ, ಮದ್ದಳೆ ವಾದನಕಾರರಾಗಿ ರಾಘವೇಂದ್ರ ಹೆಗಡೆ, ಯಲ್ಲಾಪುರ ಭಾಗವಹಿಸಿದ್ದರು. ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಪಿ.ನಾರಾಯಣ ಶೆಟ್ಟಿ, ಪಪೂ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು.
ಸಂಸ್ಕೃತ ಉಪನ್ಯಾಸಕ ವಿದ್ವಾನ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.





