ಬಾಲ ಭಿಕ್ಷಾಟನೆ ನಿರ್ಮೂಲನೆ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ
.gif)
ಮಂಗಳೂರು, ಸೆ.29: ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಚೈಲ್ಡ್‌ಲೈನ್ ಮಂಗಳೂರು ಇದರ ಸಹಯೋಗದಲ್ಲಿ ಬಾಲ ಭಿಕ್ಷಾಟನೆ ನಿರ್ಮೂಲನೆ ಜನ ಜಾಗೃತಿ ಅಭಿಯಾನವು ಇಂದು ನಗರದಲ್ಲಿ ನಡೆಯಿತು.
ಮನಪಾ ಕಚೇರಿಯೆದುರು ಅಭಿಯಾನಕ್ಕೆ ಚಾಲನೆ ನೀಡಿದ ಮೇಯರ್ ಹರಿನಾಥ್‌ರವರು ಜನಜಾಗೃತಿ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಅಭಿಯಾನದ ಅಂಗವಾಗಿ ನಗರದ 12 ಸರ್ಕಲ್‌ಗಳಲ್ಲಿ ಇಂದು ಏಕಕಾಲದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಾಲ ಭಿಕ್ಷಾಟನೆ ವಿರುದ್ಧದ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನೊಳಗೊಂಡ ಫಲಕಗಳೊಂದಿಗೆ ಗಮನಸೆಳೆದರು.
ಬಳಿಕ ಮನಪಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉಪಮೇಯರ್ ಸುಮಿತ್ರಾ ಕರಿಯ, ಡಿಸಿಪಿ ಡಾ.ಸಂಜೀವ ಪಾಟೀಲ್, ಚೈಲ್ಡ್ ಲೈನ್‌ನ ರೆನ್ನಿ ಡಿಸೋಜ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
Next Story





