ಇಂಗ್ಲೆಂಡಿನಲ್ಲಿ ಆಕರ್ಷಕ ವೇತನದ ಉದ್ಯೋಗಕ್ಕೂ ಅರಬಿ ಭಾಷೆಗೂ ಏನು ನಂಟು ನೋಡಿ

ಲಂಡನ್, ಸೆ.29: ಅರಬಿ ಭಾಷೆ ಕಲಿತಿರುವವರಿಗೆ ಇಂಗ್ಲೆಂಡಿನಲ್ಲಿ ಆಕರ್ಷಕ ವೇತನದ ಉದ್ಯೋಗದೊರೆಯಬಹುದೆಂದು ಜಾಬ್ ಸರ್ಚ್ ಇಂಜಿನ್‌ಅಡ್ಝುನ ಹೇಳಿದೆ. ಇಂಗ್ಲಂಡಿನ ಕಾರ್ಮಿಕ ವಲಯದಲ್ಲಿ ಅರಬಿಕ್ ಅತ್ಯಂತ ಬೇಡಿಕೆಯ ಭಾಷೆಯಾಗಿದೆ ಎಂದುಅದುಹೇಳಿದೆ.
ಒಂದು ಮಿಲಿಯಕ್ಕೂ ಅಧಿಕ ಉದ್ಯೋಗಗಳ ಬಗ್ಗೆ ಪರಿಶೀಲನೆ ನಡೆಸಿರುವ ಈ ಬ್ರಿಟಿಷ್ ಕಂಪೆನಿ ಹೆಚ್ಚಿನ ಉದ್ಯೋಗಗಳಲ್ಲಿ ಇಂಗ್ಲಿಷ್ ಜತೆ ಅರಬಿಕ್ ಭಾಷೆ ಗೊತ್ತಿರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಲಾಗಿದೆಯೆಂದು ತಿಳಿಸಿದೆ.
ಈ ಕಂಪೆನಿ ನಡೆಸಿದ ಅಧ್ಯಯನದ ಪ್ರಕಾರ ವಿವಿಧ ಉದ್ಯೋಗಗಳಿಗೆ ಇಂಗ್ಲಿಷ್ ಹೊರತುಪಡಿಸಿ ಇತರ ಒಂಬತ್ತು ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆ ಗೊತ್ತಿರಬೇಕೆಂದು ಹೇಳಲಾಗಿದೆ ಹಾಗೂಈ ವಿವಿಧ ಭಾಷೆಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದ ಭಾಷೆಗಳಪಟ್ಟಿಯಲ್ಲಿ ಅರಬಿಕ್ ಎರಡನೆ ಸ್ಥಾನ ಪಡೆದುಕೊಂಡಿದೆ.
ಕೇವಲ ಇಂಗ್ಲಿಷ್ ಭಾಷೆ ಗೊತ್ತಿರುವವರಿಗಿಂತ ಇಂಗ್ಲಿಷ್ ಜತೆ ಅರಬಿಕ್ ಭಾಷೆ ಗೊತ್ತಿರುವವರಿಗೆ ಹೆಚ್ಚು ಬೇಡಿಕೆಯಿದೆಯೆಂದೂ ಅದು ಕಂಡುಕೊಂಡಿದೆ.
ಇಂಗ್ಲಿಷ್ ಜತೆಗೆ ಜರ್ಮನ್ ಭಾಷೆ ಗೊತ್ತಿರುವವರಿಗೆ ಹೆಚ್ಚಿನ ಕಂಪೆನಿಗಳು ಪ್ರಥಮ ಪ್ರಾಶಸ್ತ್ಯ ನೀಡಿವೆ ಎಂದು ಅಡ್ಝುನ ಹೇಳಿದೆ. ಇಂಗ್ಲಿಷ್ ಹಾಗೂ ಜರ್ವನ್ ಭಾಷೆ ಗೊತ್ತಿರುವವರಿಗೆ ಸರಾಸರಿ ವಾರ್ಷಿಕ ವೇತನ 34,534 ಪೌಂಡ್ ಆಗಿದ್ದರೆ, ಇಂಗ್ಲಿಷ್ ಹಾಗೂ ಅರಬಿಕ್ ಭಾಷೆ ಗೊತ್ತಿರುವವರಿಗೆ ವಾರ್ಷಿಕ ಸರಾಸರಿ 34,122 ಪೌಂಡ್ ವೇತನ ದೊರೆಯುವುದೆಂದು ಹೇಳಲಾಗಿದೆ. ಅರಬಿಕ್ ನಂತರದ ಸ್ಥಾನ ಫ್ರೆಂಚ್, ಡಚ್, ಸ್ಪ್ಯಾನಿಶ್, ಜಪಾನಿ, ರಷ್ಯನ್, ಇಟಾಲಿಯನ್ ಹಾಗೂ ಚೀನೀ ಭಾಷೆಗಳು ಪಡೆದಿವೆ.





