Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತ-ಪಾಕ್ ಅಣು ಯುದ್ಧವಾದರೆ ಜಗತ್ತು...

ಭಾರತ-ಪಾಕ್ ಅಣು ಯುದ್ಧವಾದರೆ ಜಗತ್ತು ತೆರಬೇಕಾದ ಬೆಲೆ ಏನು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ29 Sept 2016 1:40 PM IST
share
ಭಾರತ-ಪಾಕ್ ಅಣು ಯುದ್ಧವಾದರೆ ಜಗತ್ತು ತೆರಬೇಕಾದ ಬೆಲೆ ಏನು ಗೊತ್ತೇ ?
  •  ಎಷ್ಟು ಕೋಟಿ ಸಾವು ನೋವು ?
  •  ಜಾಗತಿಕ ಪರಿಣಾಮಗಳು ಏನೇನು ?
  • ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳೇನು ?

ನವದೆಹಲಿ, ಸೆ.29: ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಅಣು ಯುದ್ಧವೇನಾದರೂ ಸಂಭವಿಸಿದರೆ ಏನೇನೆಲ್ಲಾ ಅನಾಹುತಗಳಾಗಬಹುದೆಂದು ಯಾವತ್ತಾದರೂ ಯೋಚಿಸಿದ್ದೀರಾ ? ಫಸ್ಟ್ ಪೋಸ್ಟ್ ನಲ್ಲಿ ಪ್ರಕಟವಾದ ಈ ವರದಿ ನಿಮಗೆ ಇಂತಹ ಒಂದು ಯುದ್ಧದಿಂದ ಉಂಟಾಗಬಹುದಾದ ಘೋರ ಪರಿಣಾಮಗಳ ಚಿತ್ರಣ ನೀಡುತ್ತದೆ.

ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ 100 ಅಣ್ವಾಸ್ತ್ರಗಳನ್ನು (ಎರಡೂ ದೇಶಗಳು ಹೊಂದಿರುವ ಒಟ್ಟು ಅಣ್ವಸ್ತ್ರಗಳ ಅರ್ಧದಷ್ಟು) ಪ್ರಯೋಗಿಸಿದಲ್ಲಿ ಅದುಹಿರೋಶಿಮಾ ಬಾಂಬಿನ15 ಕಿಲೋಟನ್ ಅಧಿಕ ಸಾಮರ್ಥ್ಯ ಹೊಂದಿರುತ್ತದೆಯಲ್ಲದೆ, ಅದರಿಂದ ನೇರವಾಗಿ 2.1 ಕೋಟಿ ಜನರ್ನು ಕೊಲ್ಲಬಹುದಾಗಿದೆ. ಅಷ್ಟೇ ಅಲ್ಲ, ವಿಶ್ವದ ಅರ್ಧದಷ್ಟು ಓಝೋನ್ ಪದರವನ್ನೂ ಅದು ನಾಶಗೊಳಿಸುವುದು. ಈ ‘ನ್ಯೂಕ್ಲಿಯರ್ ವಿಂಟರ್’ನಿಂದಾಗಿ ವಿಶ್ವದೆಲ್ಲೆಡೆ ಮಳೆಗಾಲ ಹಾಗೂ ಕೃಷಿ ಕ್ಷೇತ್ರಗಳು ಬಾಧಿತವಾಗುವವೆಂದು 2007ರಲ್ಲಿಅಮೆರಿಕಾದ ರುಟ್ಗೆರ್ಸ್ ವಿಶ್ವವಿದ್ಯಾಲಯ, ಕೊಲಾರಡೊ-ಬೋಲ್ಡರ್ ವಿವಿ ಹಾಗೂ ಕ್ಯಾಲಿಫೋರ್ನಿಯಾ ವಿವಿ, ಲಾಸ್ ಏಂಜಲಿಸ್ ಇವುಗಳ ಅಧ್ಯಯನಕಾರರು ನಡೆಸಿರುವ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಪಾಕಿಸ್ತಾನವು ಭಾರತದ ಮೇಲೆ ಅಣು ದಾಳಿ ನಡೆಸಿದಲ್ಲಿ ಒಂದು ಕೋಟಿ ಭಾರತೀಯರು ಸಾಯಬಹುದೆಂದು ಆದರೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಇಡೀ ಪಾಕಿಸ್ತಾನ ಇಲ್ಲವಾಗಬಹುದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಕೆಲದಿನಗಳ ಹಿಂದೆ ಹೇಳಿದ್ದರು.
ಆದರೆ ಇಂತಹ ಒಂದು ಯುದ್ಧ ನಡೆದರೆ ಅದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ, ಎರಡನೆ ವಿಶ್ವಯುದ್ಧದಲ್ಲಿ ಮಡಿದವರ ಸಂಖ್ಯೆಯ ಅರ್ಧದಷ್ಟು ಮಂದಿ ಮೊದಲ ವಾರದಲ್ಲೇ ವಿಕಿರಣ, ಸುಟ್ಟ ಗಾಯಗಳಿಂದ ಸಾವನ್ನಪ್ಪಬಹುದೆಂದು ಅಧ್ಯಯನ ತಂಡ ಕಂಡುಕೊಂಡಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಉಗ್ರ ದಾಳಿಗಳಲ್ಲಿಭಾರತದಲ್ಲಿ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಸಂಖ್ಯೆಗಿಂತ2,221 ಪಟ್ಟು ಹೆಚ್ಚುಜನರು ಸಾವನ್ನಪ್ಪಬಹುದೆಂದು ಇಂಡಿಯ ಸ್ಪೆಂಡ್ ವಿಶ್ಲೇಷಣೆಯೊಂದುಹೇಳಿದೆ.
ಇಷ್ಟೇ ಅಲ್ಲದೆ ವಿಶ್ವದಾದ್ಯಂತ ಎರಡು ಬಿಲಿಯನ್ ಜನರು ವಾತಾವರಣದ ಮೇಲುಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳಿಂದಾಗಿ ಹಸಿವಿನಿಂದ ನರಳಬಹುದೆಂದು ಇಂಟರ್ ನ್ಯಾಷನಲ್ ಫಿಸಿಶಿಯನ್ಸ್ ಫಾರ್ ದಿ ಪ್ರಿವೆನ್ಶನ್ ಆಫ್ ನ್ಯೂಕ್ಲಿಯರ್ ವಾರ್ ತಿಳಿಸಿದೆ.
ಪಾಕಿಸ್ತಾನದ ಬಳಿ 110ರಿಂದ 130 ಅಣ್ವಸ್ತ್ರಗಳಿವೆಯಾದರೆ ಭಾರತದ ಬಳಿ 110ರಿಂದ 120 ಅಣ್ವಸ್ತ್ರಗಳಿವೆ.
ಭಾರತದ ಕಾಶ್ಮೀರದಲ್ಲಿ ನಡೆದ ಉರಿ ಉಗ್ರ ದಾಳಿಯಲ್ಲಿ 18 ಯೋಧರು ಹತರಾದ ನಂತರ ಭಾರತ-ಪಾಕ್ ನಡುವೆ ಯುದ್ಧ ನಡೆಯಬಹುದೆನ್ನುವಂತಹ ವರದಿಗಳು ಬರಲಾರಂಭಿಸಿದ್ದವು.
ಪಾಕಿಸ್ತಾನದ ಬಳಿಯಿರುವ ಶೇ.66ರಷ್ಟು ಅಣ್ವಸ್ತ್ರಗಳು ಭೂಮಿಯ ಮೇಲಿಂದ ಪ್ರಯೋಗಿಸಲಾಗುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲಿರಿಸಿ ಪ್ರಯೋಗಿಸುವಂತಹದ್ದು, ಎಂದು ಅಟಾಮಿಕ್ ಸೈಂಟಿಸ್ಟ್ಸ್‌ಇರ ಬುಲೆಟಿನ್ ಒಂದರಲ್ಲಿ ತಿಳಿಸಲಾಗಿದೆ.ಪಾಕಿಸ್ತಾನದ ಹಟ್ಫ್ ಎಂಬ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸರಣಿ ಭಾರತವನ್ನೇ ಗಮನದಲ್ಲಿರಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.
ಪಾಕಿಸ್ತಾನದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವೇನಾದರೂ ನಡೆದರೆ ಅವುಗಳು ಭಾರತದ ನಾಲ್ಕು ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈಯನ್ನು ಗುರಿಯಾಗಿಸಬಹುದೆಂದುರಾಷ್ಟ್ರೀಯ ಸುರಕ್ಷತಾ ವಿಚಾರಗಳ ತಜ್ಞ ಸಮೀರ್ ಪಾಟೀಲ್ ಹೇಳುತ್ತಾರೆ.
ಪಾಕ್ ತನ್ನ ಹಲವಾರು ಅಣ್ವಸ್ತ್ರಗಳನ್ನು ಘೌರಿ, ಶಹೀನ್, ನಸ್ರ್ ಭೂ ಕ್ಷಿಪಣಿ ಮೇಲಿರಿಸಿ ಪ್ರಯೋಗಿಸುವ ಸಾಧ್ಯತೆಯಿದ್ದರೆ, ಇನ್ನು ಕೆಲವು ನೌಕಾ ಕ್ಷಿಪಣಿ ಹಾಗೂ ಸುಮಾರು 36 ಅಣ್ವಸ್ತ್ರಗಳನ್ನು ಯುದ್ಧ ವಿಮಾನಗಳ ಮೂಲಕ ಪ್ರಯೋಗಿಸಬಹುದಾಗಿದೆ.
ಅಂತೆಯೇ ಬುಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್ ಪ್ರಕಾರ ಭಾರತದ ಬಳಿ 56 ಪೃಥ್ವಿ ಹಾಗೂ ಅಗ್ನಿಸರಣಿಯ ಕ್ಷಿಪಣಿಗಳಿದ್ದು ಇವುಗಳ ಮೂಲಕಭಾರತದಲ್ಲಿರುವ ಅಣ್ವಸ್ತ್ರಗಳ ಪೈಕಿ ಶೇ.53ರಷ್ಟು ಅಣ್ವಸ್ತ್ರಗಳನ್ನು ಪ್ರಯೋಗಿಸಬಹುದಾಗಿದೆ.

ಭಾರತದ ಬಳಿಯಿರುವ ಧನುಶ್ ಎಸ್.ಆರ್.ಬಿ.ಎಂ. ಯುದ್ಧ ನೌಕೆ ಕೂಡ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಭಾರತೀಯ ವಾಯುಪಡೆಯ ಫೈಟರ್ ಬಾಂಬರುಗಳು ಸುಮಾರು 16 ಅಣ್ವಸ್ತ್ರಗಳನ್ನು ಪ್ರಯೋಗಿಸುವ ಶಕ್ತಿ ಹೊಂದಿವೆ.

ಕೃಪೆ:firstpost.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X