ನಿಮ್ಮ ಪ್ರಯಾಣ ಸುಲಭವಾಗಲು ಈ 10 ನಿಮ್ಮ ಜೊತೆ ಇರಲಿ

ಬ್ಯಾಗ್ ಪ್ಯಾಕಿಂಗ್ ಎನ್ನುವುದೂ ಒಂದು ಕಲೆ ಎಂದು ಜೆರೋಮ್ ಕೆ ಹೇಳಿದ್ದರು. ಅವರ ಈ ಪ್ರಸಿದ್ಧ ಮಾತು ಇಂದಿಗೂ ನಿಜ. ನೀವು ಆಗಾಗ್ಗೆ ಪ್ರಯಾಣಿಸುತ್ತೀರಾ ಅಥವಾ ಇಲ್ಲವೇ ಎನ್ನುವುದು ಮುಖ್ಯವಲ್ಲ. ಆದರೆ ಪ್ರಯಾಣವನ್ನು ಸರಿಯಾಗಿ ಮಾಡುವುದು ಮುಖ್ಯ. ಪ್ರಯಾಣಕ್ಕೆ ಮೊದಲು ಬಹಳಷ್ಟು ಸಿದ್ಧತೆ ಮತ್ತು ಜೊತೆಗೆ ಕೊಂಡೊಯ್ಯಬೇಕಾದ ವಸ್ತುಗಳ ಪಟ್ಟಿ ಮಾಡಿಕೊಳ್ಳಬೇಕು. ಇಲ್ಲಿ ನಿಮಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
1. ಎಲ್ಲಾ ಪ್ರಮುಖ ದಾಖಲೆಗಳು
ಎಲ್ಲಾ ಪ್ರಮುಖ ದಾಖಲೆಗಳು, ಟಿಕೆಟ್, ಪಾಸ್‌ಪೋರ್ಟ್, ವೀಸಾ, ಆರೋಗ್ಯವಿಮೆ (ಅಂತರಾಷ್ಟ್ರೀಯ ಪ್ರಯಾಣಕ್ಕೆ) ಐಡಿ, ಕ್ರೆಡಿಟ್ ಕಾರ್ಡ್‌ಗಳು, ತುರ್ತು ಸಂಪರ್ಕ ಮತ್ತು ವಿಳಾಸಗಳನ್ನು ಪ್ರಯಾಣ ದಾಖಲೆಯಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಸ್ವತಃ ಹಿಡಿದುಕೊಳ್ಳಿ. ಇವೆಲ್ಲವೂ ಒಂದೇ ಕಡೆ ಇರಲಿ. ತೆರೆದ ಬ್ಯಾಗಿನಲ್ಲಿ ಅಥವಾ ಪರ್ಸಲ್ಲಿ ಇವುಗಳನ್ನು ಇಡಬೇಡಿ.
2. ಹಿತಕರ ಬಟ್ಟೆಗಳು
ಮನೆಯಿಂದ ಹೊರಗೆ ಹೋಗುವಾಗ ಮೊದಲಿಗೆ ಹಿತಕರವಾಗಿರಲು ಬಯಸುತ್ತೇವೆ. ಹೀಗಾಗಿ ಮನಸ್ಸಿಗೆ ಹಿಡಿಸುವ ಬಟ್ಟೆಗಳೇ ಇರಲಿ. ಫ್ಯಾಷನ್ ಎಂದರೆ ಹಿತವಾಗಿರಲಿ. ಚಪ್ಪಲಿಗೂ ಇದೇ ಅನ್ವಯಿಸುತ್ತದೆ.
3. ಸ್ವಲ್ಪ ನಗದು
ನಿಮ್ಮ ಬಳಿ ಬಹಳಷ್ಟು ಕ್ರೆಡಿಟ್ ಕಾರ್ಡ್‌ಗಳು ಇದ್ದರೂ ಎಲ್ಲಾ ಕಡೆ ಎಟಿಎಂಗಳು ಇದ್ದರೂ ಸ್ವಲ್ಪ ನಗದು ಜೊತೆಗಿರಲಿ. ಸಣ್ಣ ಚಿಲ್ಲರೆಗಳೂ ಇರಲಿ. ಕಠಿಣ ಸಮಯದಲ್ಲಿ ಇದೇ ನಿಮಗೆ ಭದ್ರತೆ.
4. ನಕ್ಷೆಗಳು ಮತ್ತು ಮಾರ್ಗದರ್ಶಿಗಳು
ಮೊದಲ ಬಾರಿಗೆ ಒಂದು ಜಾಗಕ್ಕೆ ಹೋಗುವುದಾದಲ್ಲಿ ನೀವು ತಂಗುವ ಸ್ಥಳದ ಅಥವಾ ಬುಕ್ ಮಾಡಿದ ಹೊಟೇಲ್ ವಿಳಾಸ ಮತ್ತು ಫೋನ್ ನಂಬ್ರಗಳು ಜತೆಗಿರಲಿ. ನಕ್ಷೆಗಳು ಮತ್ತು ಮಾರ್ಗದರ್ಶಿ ವಿವರಗಳೂ ಬೇಕು.
5. ಪ್ರಥಮ ಚಿಕಿತ್ಸಾ ಕಿಟ್
ಪ್ರಥಮ ಚಿಕಿತ್ಸಾ ಕಿಟ್ ಮಕ್ಕಳು ಜೊತೆಯಲ್ಲಿ ಪ್ರಯಾಣಿಸುತ್ತಿದ್ದಲ್ಲಿ ಅತ್ಯಗತ್ಯ. ಅವರಿಗೆ ನೋವು, ಜ್ವರ, ಹೊಟ್ಟೆ ನೋವು ಮತ್ತು ವಾಂತಿಗೆ ನಿತ್ಯದ ಔಷಧಿ ಜತೆಗಿರಲಿ.
6. ಒಂದು ಅಥವಾ ಎರಡು ಪುಸ್ತಕ
ಪುಸ್ತಕಕ್ಕಿಂತ ಉತ್ತಮ ಸಂಗಾತಿ ಪ್ರಯಾಣದಲ್ಲಿ ಬೇರೊಂದಿಲ್ಲ. ನಿತ್ಯದ ಬಳಕೆಗೆ ಬ್ಯಾಗಲ್ಲಿ ಇದೂ ಇರಲಿ. ಇಬುಕ್ ಇದ್ದರೆ ಉತ್ತಮ. ದಿನದ ಪ್ಯಾಕ್ ಹಗುರ ಮತ್ತು ಕೊಂಡೊಯ್ಯಲು ಹಗುರವಾಗಿರಲಿ.
7. ಅಗತ್ಯ ಗಜೆಟ್‌ಗಳು
ದೂರವಾಣಿ, ಕ್ಯಾಮರಾ, ಲ್ಯಾಪ್‌ಟಾಪ್/ಐಪ್ಯಾಡ್, ಚಾರ್ಜರ್‌ಗಳು ಮತ್ತು ಕೇಬಲ್, ಎಕ್ಸಟೆನ್ಷನ್ ಕಾರ್ಡ್‌ಗಳು ಮತ್ತು ಅಡಾಪ್ಟರ್‌ಗಳು ಪ್ರಯಾಣದ ಸಂದರ್ಭ ಅಗತ್ಯ. ಇವೆಲ್ಲವೂ ಇದೆ ಎಂದು ಪ್ರಯಾಣದ ಮೊದಲು ಖಚಿತಪಡಿಸಿ.
8. ಅಗತ್ಯದ ವಸ್ತುಗಳು
ಕೊಡೆ, ಕನ್ನಡಕ, ಟಾರ್ಚ್, ಸೊಳ್ಳೆ ಬತ್ತಿ, ಬೆಂಕಿಪೊಟ್ಟಣ, ಚೂರಿ, ಸನ್‌ಸ್ಕ್ರೀನ್ ಲೋಷನ್, ಹ್ಯಾಂಡ್ ಸ್ಯಾನಿಟೈಸರ್, ವೆಟ್ ವೈಪ್ಸ್ ಮತ್ತು ಚಳಿಗಾಲದಲ್ಲಾದರೆ ಕೋಲ್ಡ್ ಕ್ರೀಮ್ ಇರಲಿ. ಫೋನ್ ಅಲಾರಾಂ ಬಳಸದಿದ್ದಲ್ಲಿ, ಪ್ರತ್ಯೇಕ ಅಲಾರಾಂ ಗಡಿಯಾರ ಜತೆಗಿರಲಿ.
9. ಬೋರ್ಡ್ ಗೇಮ್ಸ್
ಕಾರ್ಡ್‌ಗಳು ಮತ್ತು ಇತರ ಬೋರ್ಡ್ ಗೇಮ್‌ಗಳನ್ನು ಕೊಂಡೊಯ್ದರೆ ಸ್ನೇಹಿತರ ಜೊತೆಗೆ ಆಡಬಹುದು. ರಜೆಯಲ್ಲಿ ಒಳಾಂಗಣ ಆಟದ ಮೂಲಕ ಸಂತೋಷ ಪಡುವುದು ಚೆನ್ನಾಗಿರುತ್ತದೆ.
10. ಸ್ವಚ್ಛತಾ ಬ್ಯಾಗ್
ಸ್ವಚ್ಛತೆಗೆ ಬಳಸುವ ವಸ್ತುಗಳು ಹಗುರವಾಗಿರಲಿ. ಸಣ್ಣ ಪ್ಯಾಕ್ ಟೂತ್‌ಪೇಸ್ಟ್, ಫೇಸ್‌ವಾಷ್, ಮೌತ್ ವಾಷ್, ಶಾಂಪೂ, ಕಂಡೀಷನರ್ ಮತ್ತು ಡಿಯೋಡ್ರಂಟ್ ಇರಲಿ. ಟೂತ್ ಬ್ರಶ್, ಬಾಚಣಿಗೆ ಮತ್ತು ಇತರ ಮಹಿಳೆಯರ ನೈರ್ಮಲ್ಯ ವಸ್ತುಗಳೂ ಇರಲಿ.
ಕೃಪೆ: http://www.hindustantimes.com/







