ಡಿಕೆಎಂಎಯಿಂದ ಸೌಲಭ್ಯಗಳ ವಿತರಣೆ

ಮಂಗಳೂರು, ಸೆ.29: ದಕ್ಷಿಣ ಕನ್ನಡ ಮುಸ್ಲಿಮ್ ಅಸೋಸಿಯೇಶನ್(ಡಿ.ಕೆ.ಎಂ.ಎ.) ವತಿಯಿಂದ 33 ಫಲಾನುಭವಿಗಳಿಗೆ ಡಿ.ಕೆ.ಎಂ.ಎ. ಫಲಾನುಭವಿ ಕಾರ್ಡ್, ಆರೋಗ್ಯ ಕಾಡ್ ಮತ್ತು ಸಿಮ್ ಕಾರ್ಡ್‌ಗಳನ್ನು ಎಸ್.ಆರ್.ಗ್ರೂಪ್ ಕಚೇರಿಯಲ್ಲ್ಲಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಡಿ.ಕೆ.ಎಂ ಸಂಸ್ಥಾಪಕ ಎಸ್.ಎಂ.ರಶೀದ್ ಹಾಜಿ, ಈ ಹಿಂದೆ 50 ಫಲಾನುಭವಿಗಳಿಗೆ ಈ ಸೌಲಭ್ಯವನ್ನು ವಿತರಿಸಲಾಗಿದೆ. ಈ ಸೌಲಭ್ಯ ಅವಶ್ಯವಿರುವ ಅರ್ಹರು ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸುವಂತೆ ಅವರು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಮನ್ಸೂರ್ ಆಝಾದ್, ಸದಸ್ಯರಾದ ಶೌಕತ್‌ಸೌರಿ, ಆಸಿಫ್ ಹೋಮ್ಪ್ಲಸ್ ಮತ್ತು ಸುಲೈಮಾನ್ ಕರಾಯ ಉಪಸ್ಥಿತರಿದ್ದರು.
Next Story





