ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ಲೀಲಾವತಿ ಚಾಲನೆ

ಸಿದ್ದಾಪುರ, ಸೆ.29: ಮಾಲ್ದಾರೆ ಗ್ರಾಪಂ ಬಾಣಂಗಾಲ ಮಠ ಹಾಗೂ ಹುಂಡಿ ಗ್ರಾಮದಲ್ಲಿ ಸದಸ್ಯರ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯೆ ಲೀಲಾವತಿ ಚಾಲನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಗೆ ಸ್ವಂದಿಸಿ ಮಠ ಗ್ರಾಮದ ಮುಖ್ಯ ರಸ್ತೆಯನ್ನು 2ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಹಾಗೂ ಹುಂಡಿ ಗ್ರಾಮದ ಮಸೀದಿಗೆ ತೆರಳುವ ಮುಖ್ಯ ರಸ್ತೆಯನ್ನು 3ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಹಾಜಿ ಪಿ.ಸಿ. ಹಸೈನಾರ್ ಮಾತನಾಡಿ, ಗ್ರಾಮಾಭಿವೃದ್ಧಿಗೆ ಪಕ್ಷ ಭೇದ ಮರೆತು ಶ್ರಮಿಸಬೇಕೆಂದ ಅವರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿಯೋಗ ತೆರಳಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚು ಅನುದಾನ ತಂದು ಗ್ರಾಮಾಭಿವೃದ್ಧಿಗೆ ಮುಂದಾಗುವುದಾಗಿ ಹೇಳಿದರು.
ಈ ಸಂದರ್ಭ ತಾಪಂ ಸದಸ್ಯರಾದ ಚಿನ್ನಮ್ಮ, ಕಾವೇರಮ್ಮ, ಗ್ರಾಪಂ ಸದಸ್ಯರಾದ ಮುತ್ತಪ್ಪ, ಉಮೇಶ್, ಸೇವಾದಳದ ಕಾರ್ಯದರ್ಶಿ ಗಾಯತ್ರಿ, ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಸೊಮಯ್ಯ, ಪರಿಶಿಷ್ಟ ವರ್ಗದ ಅಧ್ಯಕ್ಷ ಲೊಕೇಶ್‌ಕುಮಾರ್, ಸ್ಥಳೀಯರಾದ ಸಿ.ಎ. ಹಂಸ, ಹೇಮಚಂದ್ರ, ಸೋಮಯ್ಯ, ಅಜ್ಜಿನಿಕಂಡ ರಾಜು ಅಪ್ಪಯ್ಯ, ಅಬೂಬಕ್ಕರ್, ಮುಹಮ್ಮದ್ ಅಲಿ, ಬಾವ ಮಾಲ್ದಾರೆ, ಅದ್ರಮಾನ್ ಸೇರಿದಂತೆ ಮತ್ತಿತರರಿದ್ದರು.







