ಪಾಕ್ ಗಾಯಕ ಆತಿಫ್ ಅಸ್ಲಂ ಗುರ್ಗಾಂವ್ ಕಾರ್ಯಕ್ರಮ ರದ್ದು

ಗುರ್ಗಾಂವ್,ಸೆ.29: ಇಲ್ಲಿ ಅ.15ರಂದು ಆಯೋಜಿಸಲಾಗಿದ್ದ ಜನಪ್ರಿಯ ಪಾಕಿಸ್ತಾನಿ ಗಾಯಕ ಆತಿಫ್ ಅಸ್ಲಾಂ ಅವರ ಕಾರ್ಯಕ್ರಮವನ್ನು ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.
ಕಾರ್ಯಕ್ರಮವನ್ನು ಮುಂದೂಡುವಂತೆ ಜಿಲ್ಲಾಡಳಿತವು ಸಂಘಟಕರಿಗೆ ‘ಸಲಹೆ ’ ನೀಡಿದ್ದರೆ, ಕಾರ್ಯಕ್ರಮವನ್ನು ‘ಅನಿರ್ದಿಷ್ಟಾವಧಿಗೆ ’ ಮುಂದೂಡಲು ತಾವು ಈಗಾಗಲೇ ನಿರ್ಧರಿಸಿದ್ದಾಗಿ ಸಂಘಟಕರು ತಿಳಿಸಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತಿರಲು ಅಸ್ಲಾಂ ಕಾರ್ಯಕ್ರಮಕ್ಕೆ ನೀಡಿರುವ ಪರವಾನಿಗೆಯನ್ನು ಹಿಂದೆಗೆದುಕೊಳ್ಳುವಂತೆ ಅಖಿಲ ಭಾರತೀಯ ಹಿಂದು ಕ್ರಾಂತಿದಳವು ಜಿಲ್ಲಾಡಳಿತವನ್ನು ಆಗ್ರಹಿಸಿತ್ತು. ಅಸ್ಲಾಂ ಉರಿ ದಾಳಿಯ ಬಳಿಕ ತನ್ನ ಕಾರ್ಯಕ್ರಮ ರದ್ದುಗೊಂಡಿರುವ ಪಾಕಿಸ್ತಾನದ ಎರಡನೇ ಗಾಯಕರಾಗಿದ್ದಾರೆ. ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶಫಕತ್ ಅಮಾನತ್ ಅಲಿ ಅವರ ತಂಡದ ಕಾರ್ಯಕ್ರಮವು ಈಗಾಗಲೇ ರದ್ದಾಗಿದೆ.
Next Story





