ನಮ್ಮ ಶಾಂತಿಯ ಇಚ್ಛೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ : ನವಾಝ್ ಶರೀಫ್

ಇಸ್ಲಾಮಾಬಾದ್, ಸೆ. 29: ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯ ಒಳಗೆ ನುಗ್ಗಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿರುವುದು ‘‘ಅಪ್ರಚೋದಿತ ಮತ್ತು ಆಕ್ರಮಣಕಾರಿ ಕೃತ್ಯ’’ವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಗುರುವಾರ ಹೇಳಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.
‘‘ನಾವು ಈ ದಾಳಿಯನ್ನು ಖಂಡಿಸುತ್ತೇವೆ. ನಮ್ಮ ಶಾಂತಿಯ ಇಚ್ಛೆಯನ್ನು ನಮ್ಮ ದೌರ್ಬಲ್ಯ ಎಂಬುದಾಗಿ ಭಾವಿಸಬಾರದು’’ ಎಂದು ಶರೀಫ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
‘‘ನಮ್ಮ ಶೂರ ಸೈನಿಕರು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಮರ್ಥರಾಗಿದ್ದಾರೆ ಹಾಗೂ ಪಾಕಿಸ್ತಾನದ ಸಾರ್ವಭೌಮತೆಯನ್ನು ಕಡೆಗಣಿಸಲು ನಡೆಸಲಾಗುವ ಯಾವುದೇ ಕೆಟ್ಟ ಸಂಚನ್ನು ಹಿಮ್ಮೆಟ್ಟಿಸುತ್ತಾರೆ’’ ಎಂದು ಅವರು ಹೇಳಿದ್ದಾರೆ.
Next Story





