ರಾಜ್ಯಮಟ್ಟದ ಕರಾಟೆಯಲ್ಲಿ ತೃತೀಯ

ಮಂಗಳೂರು, ಸೆ.29: ರಾಜ್ಯ ಕರಾಟೆ ಶಿಕ್ಷಕರ ಸಂಘ ಮತ್ತು ಮೂಡು ಬಿದಿರೆಯ ಶೋರಿನ್ ರಿಯು ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ಮಹಾವೀರ ಕಾಲೇಜಿನಲ್ಲಿ ಜರಗಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯ 30-35 ಕಿಲೋ ವಿಭಾಗದಲ್ಲಿ ಕಾಟಿಪಳ್ಳ ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿ ಮುಹಮ್ಮದ್ ತನ್ಸೀಪ್ ತೃತೀಯ ಸ್ಥಾನ ಗಳಿಸಿದ್ದಾನೆ. ಇವನು ಕಾಟಿಪಳ್ಳ ನಿವಾಸಿ ಪಿ.ಕೆ.ಮಯ್ಯದ್ದಿ ಮತ್ತು ಝರೀನಾ ದಂಪತಿಯ ಪುತ್ರ.
ಕರ್ಣಾಟಕ ಬ್ಯಾಂಕ್ ‘ಬಿರ್ಲಾ ಸನ್‌ಲೈಫ್’ನೊಂದಿಗೆ ಒಡಂಬಡಿಕೆ ಮಂಗಳೂರು, ಸೆ.29: ಕರ್ಣಾಟಕ ಬ್ಯಾಂಕ್ ಮತ್ತು ಬಿರ್ಲಾ ಸನ್ ಲೈಫ್ ಎಂಎಫ್ ಸಂಸ್ಥೆಯು ಮ್ಯೂಚುವಲ್ ಫಂಡ್ ವಿತರಣೆಗೆ ಸಂಬಂಧಿಸಿ ಇತ್ತೀಚೆಗೆ ಪರಸ್ಪರ ಒಡಂಬಡಿಕೆಯೊಂದನ್ನು ಮಾಡಿಕೊಂಡಿವೆ.
ಈ ಸಂದರ್ಭ ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ.ಜಯರಾಂ ಭಟ್, ಉತ್ತಮ ಗ್ರಾಹಕರ ಸಂಪರ್ಕ ಜಾಲ ಹೊಂದಿರುವ ಬ್ಯಾಂಕ್ ಬಿರ್ಲಾ ಸನ್‌ಲೈಫ್‌ನೊಂದಿಗಿನ ಒಡಂಬಡಿಕೆಯಿಂದ ಗ್ರಾಹಕರಿಗೆ ಮ್ಯೂಚುವಲ್ ಫಂಡ್ ವಿತರಣೆಗೆ ಅನುಕೂಲವಾಗಲಿದೆ ಎಂದರು.
ಬಿರ್ಲಾ ಸನ್ ಲೈಫ್ ಎಂಎಫ್ ಆಲ್‌ಟರ್‌ನೇಟ್ ಚ್ಯಾನೆಲ್ ಬ್ಯುಸಿನೆಸ್ ಡೆವಲಪ್ ಮೆಂಟ್ ವಿಭಾಗದ ಉಪಾಧ್ಯಕ್ಷ ಸೌರಭ್ ಅರೋರ ಮಾತನಾಡಿ, ಕರ್ಣಾಟಕ ಬ್ಯಾಂಕ್‌ನ ವಿವಿಧ ಶಾಖೆಗಳ ಮೂಲಕ ಕಂಪೆನಿಯ ಮ್ಯೂಚುವಲ್ ಫಂಡ್ ವ್ಯವಹಾರ ವೃದ್ಧಿಸಲು ಅನುಕೂಲವಾಗಲಿದೆ ಎಂದರು.
ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್., ಮಹಾಪ್ರಬಂಧಕ ಡಾ.ಮೀರಾ ಅರ್ಹಾನ. ರಾಘವೇಂದ್ರ ಭಟ್ ಎಂ., ಸುಭಾಸ್ ಚಂದ್ರ ಪುರಾಣಿಕ್ ಉಪಸ್ಥಿತರಿದ್ದರು.





