ಕೆಪಿಎಲ್: ಸೆಮಿಫೈನಲ್‌ನತ್ತ ಬಳ್ಳಾರಿ, ಬೆಳಗಾವಿ
ಮಾಯಾಂಕ್ ಆಕರ್ಷಕ ಶತಕ

ಹುಬ್ಬಳ್ಳಿ, ಸೆ.29: ಐದನೆ ಆವೃತ್ತಿಯ ಕೆಪಿಎಲ್ ಟೂರ್ನಿಯ ಮಳೆಬಾಧಿತ 25ನೆ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ಬಳ್ಳಾರಿ ಟಸ್ಕರ್ಸ್ ತಂಡ ಸೆಮಿ ಫೈನಲ್ ತಲುಪುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಇಲ್ಲಿನ ಕೆಎಸ್‌ಸಿಎ ರಾಜ್‌ನಗರ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯವನ್ನು ಮಳೆಯಿಂದಾಗಿ 17 ಓವರ್‌ಗೆ ಕಡಿತಗೊಳಿಸಲಾಯಿತು.
ಗೆಲ್ಲಲು ಪರಿಷ್ಕೃತ ಗುರಿ 130 ರನ್ ಗುರಿ ಪಡೆದ ಬಳ್ಳಾರಿ ತಂಡ ಹಿರಿಯ ಬ್ಯಾಟ್ಸ್‌ಮನ್ ಬಾಲಚಂದ್ರ ಅಖಿಲ್(ಔಟಾಗದೆ 61, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಚಿರಂಜೀವಿ(ಔಟಾಗದೆ 42 ರನ್, 31 ಎಸೆತ, 5 ಬೌಂಡರಿ) ಸಾಹಸದ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಬಿಜಾಪುರದ ಸ್ಟಾರ್ ಬೌಲರ್ ಅಭಿಮನ್ಯು ಮಿಥುನ್(2-16) ದಾಳಿಗೆ ಸಿಲುಕಿದ ಬಳ್ಳಾರಿ ತಂಡ 4.3ನೆ ಓವರ್‌ನಲ್ಲಿ 29 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಆಗ 4ನೆ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿದ ಚಿರಂಜೀವಿ ಹಾಗೂ ಅಖಿಲ್ 15.5 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ಟೂರ್ನಿಯಲ್ಲಿ ಆಡಿದ 7ನೆ ಪಂದ್ಯದಲ್ಲಿ 4ನೆ ಗೆಲುವು ಸಾಧಿಸಿ ಒಟ್ಟು 8 ಅಂಕ ಗಳಿಸಿರುವ ಬಳ್ಳಾರಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಸೆಮಿಫೈನಲ್ ತಲುಪುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಬಿಜಾಪುರ ಬುಲ್ಸ್ 125/9: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬಿಜಾಪುರ ಬುಲ್ಸ್ ತಂಡ ವಿಜೆಡಿ ಪದ್ದತಿಯಂತೆ ನಿಗದಿಯಾಗಿದ್ದ 17 ಓವರ್‌ಗಳ ಪಂದ್ಯದಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 125 ರನ್ ಗಳಿಸಿತು.
ಎಂದಿನಂತೆ ಆರಂಭಿಕ ಆಟಗಾರ ಆರ್. ಸಮರ್ಥ್(38) ತಂಡವನ್ನು ಆಧರಿಸಲು ಯತ್ನಿಸಿದರು. ನಾಯಕ ರಾಬಿನ್ ಉತ್ತಪ್ಪ(29 ರನ್) 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ ಎದುರಾಳಿ ತಂಡದ ನಾಯಕ ಅಮಿತ್‌ವರ್ಮಾ ಬೀಸಿದ ಎಲ್‌ಬಿಡಬ್ಲು ಬಲೆಗೆ ಬಿದ್ದರು.
ಅರ್ಶದೀಪ್ ಸಿಂಗ್ ಔಟಾಗದೆ 17 ರನ್ ಗಳಿಸಿದರು. ಬಳ್ಳಾರಿ ಪರ ಅಮಿತ್ ವರ್ಮ(3-22) ಯಶಸ್ವಿ ಬೌಲರ್ ಎನಿಸಿಕೊಂಡರು. ಜೈನ್(2-30) ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಬಿಜಾಪುರ ಬುಲ್ಸ್: 17 ಓವರ್‌ಗಳಲ್ಲಿ 125/9
(ಸಮರ್ಥ್ 38, ರಾಬಿನ್ ಉತ್ತಪ್ಪ 29, ಅರ್ಷದೀಪ್ ಸಿಂಗ್ ಔಟಾಗದೆ 17, ಅಮಿತ್ ವರ್ಮ 3-22, ಜೈನ್ 2-30)
ಬಳ್ಳಾರಿ ಟಸ್ಕರ್ಸ್: 15.5 ಓವರ್‌ಗಳಲ್ಲಿ 133/4
(ಬಿ. ಅಖಿಲ್ ಅಜೇಯ 61, ಚಿರಂಜೀವಿ ಅಜೇಯ 42, ಎಸ್‌ಎನ್ ರಾಜು 18, ಮಿಥುನ್ 2-16)
ಪಂದ್ಯಶ್ರೇಷ್ಠ: ಬಾಲಚಂದ್ರ ಅಖಿಲ್.
ದ್ವಿತೀಯ ಸ್ಥಾನಕ್ಕೇರಿದ ಬೆಳಗಾವಿ
ಹುಬ್ಬಳ್ಳಿ, ಸೆ.29: ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಬಾರಿಸಿದ ಆಕರ್ಷಕ ಶತಕ(ಔಟಾಗದೆ 119 ರನ್, 51 ಎಸೆತ, 15 ಬೌಂಡರಿ, 4 ಸಿಕ್ಸರ್)ದ ಸಹಾಯದಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ಮಂಗಳೂರು ಯುನೈಟೆಡ್ ತಂಡವನ್ನು 39 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ಕೆಪಿಎಲ್ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿತು.
ಗುರುವಾರ ಇಲ್ಲಿ ನಡೆದ ಕೆಪಿಎಲ್‌ನ 26ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡದ ಅಗರವಾಲ್ ಹಾಗೂ ಅನುರಾಗ್ ಬಾಜ್‌ಪೈ(51 ರನ್) ಮಂಗಳೂರು ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ಮೊದಲ ವಿಕೆಟ್‌ಗೆ 169 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಬೆಳಗಾವಿ 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಆರ್. ಮೋರೆ 3 ಓವರ್‌ಗಳಲ್ಲಿ 34 ರನ್ ನೀಡಿ ದುಬಾರಿಯಾದರು.
ಗೆಲ್ಲಲು ಕಠಿಣ ಗುರಿ ಪಡೆದ ಮಂಗಳೂರು 14 ಓವರ್‌ಗಳಲ್ಲಿ 137 ರನ್‌ಗೆ ಆಲೌಟಾಯಿತು. ವಿಶ್ವನಾಥನ್(46ರನ್), ರೋಹಿತ್ ಮೋರೆ(35), ನಾಯಕ ಕರುಣ್ ನಾಯರ್(25) ಎರಡಂಕೆ ಸ್ಕೋರ್ ದಾಖಲಿಸಿದರೂ ಮಂಗಳೂರು ಇನ್ನೂ 1 ಓವರ್ ಬಾಕಿ ಇರುವಾಗಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಅಕ್ಷಯ್(3-21), ಸಕುಜ(3-16), ವಿನಯ್‌ಕುಮಾರ್(2-13) ಹಾಗೂ ಸಿನ್ಹಾ(2-29) ಬೆಳಗಾವಿಯ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು. ಬಿರುಸಿನ ಶತಕ ಬಾರಿಸಿದ ಮಾಯಾಂಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







