ಸೌರವ್ ಗಂಗುಲಿ ಸಲಹೆ ಪಡೆದ ನ್ಯೂಝಿಲೆಂಡ್

ಕೋಲ್ಕತಾ, ಸೆ.29: ಉಪ ಖಂಡ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳ ದಾಳಿ ಎದುರಿಸಲು ಪರದಾಟ ನಡೆಸುತ್ತಿರುವ ನ್ಯೂಝಿಲೆಂಡ್ ಗುರುವಾರ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರಿಂದ ಉಪಯುಕ್ತ ಸಲಹೆ ಪಡೆದುಕೊಂಡಿದೆ.
ಸಿಎಬಿ ಮುಖ್ಯಸ್ಥ ಗಂಗುಲಿ ಕಿವೀಸ್‌ಗೆ ಸಂತೋಷದಿಂದಲೇ ಸಲಹೆ ಸೂಚನೆ ನೀಡಿದರು. ನ್ಯೂಝಿಲೆಂಡ್‌ನ ಬ್ಯಾಟಿಂಗ್ ಕೋಚ್ ಕ್ರೆಗ್ ಮೆಕ್‌ಮಿಲನ್‌ರೊಂದಿಗೆ ಚರ್ಚೆ ನಡೆಸಿದರು.
ಟೆಸ್ಟ್‌ನ ಮೂರನೆ ದಿನ ತಿರುವು ನೀಡಬಹುದು.ಪಿಚ್‌ನಲ್ಲಿನ ಹುಲ್ಲು ಬಹುಬೇಗನೆ ಬೆಳೆಯುತ್ತದೆ. ಪಿಚ್‌ನ ತೇವಾಂಶವನ್ನು ಕಡಿಮೆ ಮಾಡುತ್ತದೆ ಎಂದು ಗಂಗುಲಿ ಹೇಳಿದ್ದಾರೆ.
Next Story





