ವೂಹಾನ್ ಓಪನ್: ಹಾಲೆಪ್ ಸೆಮಿ ಫೈನಲ್‌ಗೆ

ವೂಹಾನ್, ಸೆ.29: ವಿಶ್ವದ ನಂ.5ನೆ ಆಟಗಾರ್ತಿ ಸಿಮೊನಾ ಹಾಲೆಪ್ ವೂಹಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಗುರುವಾರ ಇಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ರೊಮಾನಿಯ ಆಟಗಾರ್ತಿ ಹಾಲೆಪ್ ಅಮೆರಿಕದ ಮ್ಯಾಡಿಸನ್ ಕೀ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಮೊದಲ ಸೆಟ್‌ನಲ್ಲಿ ಬೇಗನೆ ಮುನ್ನಡೆ ಸಾಧಿಸಿದ್ದ ಹಾಲೆಪ್ ಎರಡನೆ ಸೆಟ್‌ನಲ್ಲಿ ಕೇವಲ 2 ಗೇಮ್ ಕೈಚೆಲ್ಲಿದರು. ಈ ಮೂಲಕ ಸಿಂಗಾಪುರದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ 8 ಆಟಗಾರರು ಆಡಲಿರುವ ಡಬ್ಲುಟಿಎ ಫೈನಲ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಹಾಗೂ ಸೆರೆನಾ ವಿಲಿಯಮ್ಸ್ ಈಗಾಗಲೇ ಈ ಪ್ರತಿಷ್ಠಿತ ಟೂರ್ನಮೆಂಟ್‌ಗೆ ಅರ್ಹತೆ ಪಡೆದಿದ್ದಾರೆ. ಇನ್ನೂ 5 ಸ್ಥಾನಗಳು ಖಾಲಿಯಿವೆ.
ಹಾಲೆಪ್ ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಕ್ವಿಟೋವಾ ಅಥವಾ ಬ್ರಿಟನ್‌ನ ಜೊಹನ್ನಾ ಕಾಂಟಾರನ್ನು ಎದುರಿಸಲಿದ್ದಾರೆ.
Next Story





