ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಕಾಲೇಜು: ಹೊರರೋಗಿ ವಿಭಾಗದ ಕಾರ್ಯಾವಧಿ ವಿಸ್ತರಣೆ
ಮಂಗಳೂರು, ಸೆ.29: ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರರೋಗಿ ವಿಭಾಗದ ಕಾರ್ಯಾ ವಧಿಯನ್ನು ಅ.1ರಿಂದ ಬೆಳಗ್ಗೆ 8:30ರಿಂದ ಅಪರಾಹ್ನ 3:30ರ ಬದಲು ಸಂಜೆ 6ರವರೆಗೆ ವಿಸ್ತರಿಸಲಾಗಿದೆ. ಈ ಸಂದರ್ಭ ಎಲ್ಲಾ ವಿಭಾಗಗಳ ವೈದ್ಯರು ಸಾರ್ವಜನಿಕರ ಆರೋಗ್ಯ ಸೇವೆಗೆ ಲಭ್ಯರಿರುತ್ತಾರೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮುಹಮ್ಮದ್ ಅಮೀನ್ ವಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





