ಕರ್ಕಶ ಹಾರ್ನ್: ಪ್ರಕರಣ ದಾಖಲು
ಮಂಗಳೂರು, ಸೆ.29: ನಗರದಲ್ಲಿ ಕರ್ಕಶ ಹಾರ್ನ್‌ಗಳನ್ನು ಹಾಕಿ ಚಲಾಯಿಸುತ್ತಿದ್ದ 107 ವಾಹನಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ರೂ. 10,700 ದಂಡ ವಿಧಿಸಿದ್ದಾರೆ. ಸಂಚಾರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 38 ಪ್ರಕರಣ ದಾಖಲಿಸಿ 3,800 ರೂ. ದಂಡ, ಸಂಚಾರ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 34 ಪ್ರಕರಣ ದಾಖಲಿಸಿ 3,400 ರೂ. ದಂಡ, ಸಂಚಾರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ಪ್ರಕರಣ ದಾಖಲಿಸಿ 3,500 ರೂ. ದಂಡವನ್ನು ವಸೂಲಿ ಮಾಡಲಾಗಿದೆ.
Next Story





