ಪಾಕಿಸ್ತಾನಕ್ಕೆ ಡಬಲ್ ಶಾಕ್ : ಇನ್ನೊಂದು ದೇಶದಿಂದಲೂ ದಾಳಿ

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್, ಸೆ.30: ಬುಧವಾರ ರಾತ್ರಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಾಚೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದರೆ, ಅದೇ ದಿನ ಪಾಕಿಸ್ತಾನಕ್ಕೆ ಇನ್ನೊಂದು ಶಾಕ್ ಕಾದಿತ್ತು.
ದೇಶದ ಪಶ್ಚಿಮದಲ್ಲಿರುವ ಇರಾನ್-ಪಾಕಿಸ್ತಾನ ಗಡಿಯ ಮೇಲೂ ಇರಾನ್ಗಡಿ ಭದ್ರತಾ ಪಡೆ ದಾಳಿ ಮೋರ್ಟರ್ ಶೆಲ್ ದಾಳಿ ನಡೆಸಿದೆ. ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದತ್ತ ಇರಾನ್ ದೇಶದ ಪಡೆಗಳು ಮೂರು ಮೊರ್ಟರ್ ಶೆಲ್ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಪಾಕಿಸ್ತಾನದ ಪಂಜ್ ಗೂರ್ ಜಿಲ್ಲೆಯ ಪ್ರದೇಶದಲ್ಲಿ ಮೊರ್ಟರ್ಶೆಲ್ ಗಳು ಬಿದ್ದಿರುವುದು ಕಂಡು ಬಂದಿವೆ. ಎರಡುಶೆಲ್ ಗಳು ಫ್ರಂಟಿಯರ್ ಕಾರ್ಪ್ಸ್ ಚೆಕ್ ಪೋಸ್ಟ್ ಸಮೀಪ ಕಂಡು ಬಂದಿದ್ದರೆ, ಮೂರನೇ ಶೆಲ್ ಕಿಲ್ಲ ಕರೀಮ್ ದದ್ ಪ್ರದೇಶದಲ್ಲಿ ಬಿದ್ದಿದೆ.
ಆದರೆ ಈ ಶೆಲ್ ದಾಳಿಯಿಂದ ಯಾವುದೇ ಸಾವುನೊೀವುಗಳುಂಟಾದ ಬಗ್ಗೆ ವರದಿಗಳಿಲ್ಲ.ಈ ದಾಳಿಯ ನಂತರ ಪಾಕಿಸ್ತಾನದ ಮಿಲಿಟರಿಇನ್ನಷ್ಟು ಕಟ್ಟೆಚ್ಚರ ವಹಿಸಿದೆ.
ಪಾಕಿಸ್ತಾನ ಹಾಗೂ ಇರಾನ್ ಮಧ್ಯೆ 900 ಕಿ.ಮೀ. ದೂರದ ಗಡಿಯಿದ್ದು,ಗಡಿಯಾಚೆದಾಳಿ ನಡೆಸಲು ಪಾಕಿಸ್ತಾನ ತನ್ನ ಪ್ರದೇಶವನ್ನು ಉಪಯೋಗಿಸುತ್ತಿದೆಯೆಂದು ಇರಾನ್ ಆರೋಪಿಸುತ್ತಲೇ ಇದೆ.
ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುವ ಉಗ್ರರನ್ನು ನಿರ್ನಾಮಗೊಳಿಸುವ ಸಲುವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸಹಕಾರ ನಿೀಡಲು ಪಾಕಿಸ್ತಾನ ಹಾಗೂ ಇರಾನ್ 2014ರಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.





