ಭಾರತೀಯ ಯೋಧನ ಬಿಡುಗಡೆಗೆ ಅಗತ್ಯ ಕ್ರಮ: ರಾಜನಾಥ್ ಸಿಂಗ್

ಹೊಸದಿಲ್ಲಿ, ಸೆ.30: ಗಡಿ ನಿಯಂತ್ರಣ ರೇಖೆ ಉಲ್ಲಂಘಸಿದ ಆರೋಪದಲ್ಲಿ ಪಾಕ್ ಬಂಧಿಸಿರುವ ಭಾರತದ ಸೈನಿಕನ ಬಿಡುಗಡೆಗೆ ಕೇಂದ್ರ ಸರಕಾರ ಅಗತ್ಯದ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕ್ ಸೇನೆ ಭಾರತೀಯ ಯೋಧ ಚಂದುಬಾಬು ಲಾಲ್ ಚೌವಾನ್ ಅವರನ್ನು ಬಹಳ ಹಿಂದೆಯೇ ಪಾಕ್ ಸೇನೆ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಪಾಕಿಸ್ತಾನ ನಿನ್ನೆಯಷ್ಟೇ ಬಂಧಿಸಲಾಗಿದೆ ಹೇಳಿಕೆ ನೀಡಿತ್ತು ಆತನ ಬಿಡುಗಡೆಗೆ ಪಾಕಿಸ್ತಾನ ಸರಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಿನ್ನೆ ಭಾರತೀಯ ಸೇನೆ ಸಡೆಸಿದ ಕಾರ್ಯಾಚರಣೆ ವೇಳೆ ಪಾಕ್ ನ ಯೋಧರು ಸೆರೆ ಸಿಕ್ಕಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದರು.
Next Story





