ಜಯಲಲಿತಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ಅಪೊಲೊ ಆಸ್ಪತ್ರೆ
.jpg)
ಚೆನ್ನೈ,ಸೆಪ್ಟಂಬರ್ 30: ಅನಾರೋಗ್ಯಕ್ಕೀಡಾಗಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜಯಲಲಿತಾರ ಅನಾರೋಗ್ಯದ ಕುರಿತು ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮೆಡಿಕಲ್ ಬುಲೆಟಿನ್‌ನಲ್ಲಿ ಜಯಲಲಿತಾರ ಆರೋಗ್ಯ ಕುರಿತು ವಿವರವನ್ನು ಪ್ರಕಟಿಸಲಾಗಿದೆ ಎಂದು ವರದಿಯಾಗಿದೆ. ಜಯಲಲಿತಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬುಲೆಟಿನ್ ಹೇಳುತ್ತಿದೆ. ಸಂಪೂರ್ಣ ಗುಣಮುಖರಾಗಲು ಇನ್ನು ಕೆಲವು ದಿವಸಗಳು ಬೇಕು. ಆದ್ದರಿಂದ ಆಸ್ಪತ್ರೆಯಲ್ಲಿ ಇರುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಪೊಲೊ ಆಸ್ಪತ್ರೆಯ ಅಧಿಕಾರಿಗಳುತಿಳಿಸಿದ್ದಾರೆ.
ಅನಾರೋಗ್ಯದ ಕಾರಣದಿಂದ ಜಯಲಲಿತಾ ಸೆಪ್ಟಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಯಲಲಿತಾರ ಆರೋಗ್ಯ ಸ್ಥಿತಿಗಂಭೀರವಾಗಿದೆ. ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲಾಗುವುದು ಎಂದು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ್ದವು ಎಂದು ವರದಿ ತಿಳಿಸಿದೆ.
Next Story





