ಚೆಕ್, ಹಣ, ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವ ಕಾಂಗ್ರೆಸ್ ಮುಖಂಡ

ಹೆಬ್ರಿ, ಸೆ.30: ಕಾರ್ಕಳದ ಸುರೇಶ್ ಎಂಬವರಿಗೆ ಸೇರಿದ ಸಹಿ ಮಾಡಿದ 50 ಸಾವಿರ ರೂ.ಗಳ ಸ್ವಂತದ ಚೆಕ್, 30 ಸಾವಿರ ರೂ. ನಗದು ಮತ್ತು ದುಬಾರಿ ಬೆಲೆಯ ಮೊಬೈಲ್ ಇತ್ತೀಚೆಗೆ ಯುವ ಕಾಂಗ್ರೆಸ್ ಮುಖಂಡ ಮುನಿಯಾಲು ಪಡುಕುಡೂರಿನ ಪ್ರಸನ್ನ ಶೆಟ್ಟಿ ಜಯಲೀಲಾ ಅವರಿಗೆ ದೊರೆತಿದ್ದು, ಅವರದನ್ನು ವಾರಸುದಾರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಲ ಸಮಯದ ಹಿಂದೆ ಮುನಿಯಾಲು ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 10 ಸಾವಿರ ರೂ. ನಗದಿನ ಬದಲು 18 ಸಾವಿರ ರೂ. ನೀಡಿದ್ದನ್ನೂ ವಾಪಾಸು ನೀಡಿ ಪ್ರಾಮಾಣಿಕತೆ ಮೆರೆದು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
Next Story





