ಕುರ್‌ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ
ಮಂಗಳೂರು, ಸೆ.30: ಎಸ್‌ಕೆಎಸ್‌ಎಮ್‌ನ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್, ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್-ರಿಯಾದ್(ಕನ್ನಡ ವಿಭಾಗ) ಮತ್ತು ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಇವುಗಳ ಆಶ್ರಯದಲ್ಲಿ ಆಯೋಜಿಸಲಾದ ಪವಿತ್ರ ಕುರ್‌ಆನಿನ 67ನೆ ಅಧ್ಯಾಯವಾದ ಸೂರಃ ಅಲ್ ಮುಲ್ಕ್ ಮತ್ತು 68ನೆ ಅಧ್ಯಾಯವಾದ ಸೂರಃ ಅಲ್ ಖಲಮ್‌ಗಳ ಅರ್ಥ ಮತ್ತು ವ್ಯಾಖ್ಯಾನಗಳಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಹಿರಿಯರ ವಿಭಾಗದಲ್ಲಿ ತಲಪಾಡಿಯ ಫೈರೂಝ ಹಲೀಮ ಪ್ರಥಮ, ಕೊಣಾಜೆಯ ಕಮರುನ್ನಿಸಾ ದ್ವಿತೀಯ ಹಾಗೂ 8 ಮಂದಿ ತೃತೀಯ ಸ್ಥಾನ ಪಡೆದಿದ್ದಾರೆ.
ಮದ್ರಸಾ ವಿಧ್ಯಾರ್ಥಿಗಳ ವಿಭಾಗದಲ್ಲಿ ತಲಪಾಡಿಯ ಇಸ್ಲಾಹೀ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ನೌಫಲ್, ಕುಂಜತ್ತಬೈಲ್ ಮದ್ರಸತು ಬಿಲಾಲ್‌ನ ವಿಧ್ಯಾರ್ಥಿನಿ ಝಫ್ರೀನ ಮತ್ತು ಅಲೇಕಲ ಅಲ್ ಫುರ್ಕಾನ್ ಮದ್ರಸದ ವಿಧ್ಯಾರ್ಥಿನಿ ಅತೀಯ ಸನೂರ ಪ್ರಥಮ, ಕುಂಜತ್ತಬೈಲ್ ಮದ್ರಸತು ಬಿಲಾಲ್‌ನ ವಿಧ್ಯಾರ್ಥಿನಿ ಶಮ್ರೀನ ದ್ವಿತೀಯ ಮತ್ತು ದೇರಳಕಟ್ಟೆಯ ಅಲ್‌ಇಸ್ಲಾಹಿಯ್ಯ ಮದ್ರಸದ ವಿಧ್ಯಾರ್ಥಿನಿ ಮುಬಶ್ಶಿರ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಲಫಿ ಎಜುಕೇಶನ್ ಬೋರ್ಡ್‌ನ ಕಾರ್ಯದರ್ಶಿ ಅಬೂಬಿಲಾಲ್ ಎಸ್.ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







