Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಪೂಜಾರ, ರಹಾನೆ ಅರ್ಧಶತಕ ; ಭಾರತ ಸಾಧಾರಣ...

ಪೂಜಾರ, ರಹಾನೆ ಅರ್ಧಶತಕ ; ಭಾರತ ಸಾಧಾರಣ ಮೊತ್ತ

ವಾರ್ತಾಭಾರತಿವಾರ್ತಾಭಾರತಿ30 Sept 2016 10:27 PM IST
share
ಪೂಜಾರ, ರಹಾನೆ ಅರ್ಧಶತಕ ; ಭಾರತ ಸಾಧಾರಣ ಮೊತ್ತ

ಕೋಲ್ಕತಾ, ಸೆ.30: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ಅಗ್ರ ಸರದಿ ವಿಫಲಗೊಂಡಿದ್ದು, ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ.
ನ್ಯೂಝಿಲೆಂಡ್‌ನ ದಾಳಿಗೆ ಸಿಲುಕಿದ ಭಾರತ ದಿನದಾಟದಂತ್ಯಕ್ಕೆ 86 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿದೆ.
 14 ರನ್ ಗಳಿಸಿರುವ ವೃದ್ಧಿಮಾನ್ ಸಹಾ ಮತ್ತು ಇನ್ನೂ ಖಾತೆ ತೆರೆಯದ ರವೀಂದ್ರ ಜಡೇಜ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅರ್ಧಶತಕಗಳನ್ನು ದಾಖಲಿಸಿ ತಂಡವನ್ನು ಆಧರಿಸಿದರು. ಇವರು ನಾಲ್ಕನೆ ವಿಕೆಟ್‌ಗೆ 141 ರನ್‌ಗಳ ಜೊತೆಯಾಟ ನೀಡಿದರು.
ರಹಾನೆ 77 ರನ್(157ಎ, 11ಬೌ) ಮತ್ತು ಚೇತೇಶ್ವರ ಪೂಜಾರ 87 ರನ್(219ಎ, 17ಬೌ) ಗಳಿಸಿ ಔಟಾದರು.
  ನ್ಯೂಝಿಲೆಂಡ್‌ನ ಬೌಲರ್‌ಗಳು ಭಾರತ ದೊಡ್ಡ ಮೊತ್ತ ದಾಖಲಿಸುವ ಯೋಜನೆಗೆ ಕಡಿವಾಣ ಹಾಕಿದರು. ನ್ಯೂಝಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಆಡಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಾಸ್ ಟೇಲರ್ ತಂಡವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ವೇಗಿ ಮ್ಯಾಟ್ ಹೆನ್ರಿ ನೇತೃತ್ವದ ಬೌಲರ್‌ಗಳು ಭಾರತದ ದಾಂಡಿಗರನ್ನು ಕಾಡಿದರು.
ಬೆಳಗ್ಗೆ ತಂಡದ ಬ್ಯಾಟಿಂಗ್ ನಿಧಾನವಾಗಿ ಸಾಗಿತು. ಮಧ್ಯಾಹ್ನದ ಬಳಿಕ ಬ್ಯಾಟಿಂಗ್ ಸುಧಾರಣೆಗೊಂಡಿತು. 21.4 ಓವರ್‌ಗಳಲ್ಲಿ ಪೂಜಾರ ಮತ್ತು ನಹಾನೆ ತಂಡವನ್ನು ಆಧರಿಸಿದರು.
ಪೂಜಾರ 146 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ನೀಲ್ ವ್ಯಾಗ್ನರ್ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿ ಅರ್ಧಶತಕ ಪೂರೈಸಿದರು.
ರಹಾನೆ 100 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸಿದರು. ರಹಾನೆ ಮತ್ತು ಪೂಜಾರ ಶತಕ ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡರು. ಕಳಪೆ ಆರಂಭ: ಇನಿಂಗ್ಸ್ ಆರಂಭಿಸಿ    ದ ಭಾರತದ ಆರಂಭಿಕ ದಾಂಡಿಗರು ಕಳಪೆ ಆರಂಭ ನೀಡಿದರು. ಐಶ್ ಸೋಧಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಮ್ಯಾಟ್ ಹೆನ್ರಿ ಅವರು ಆರಂಭಿಕ ದಾಂಡಿಗರಾದ ಶಿಖರ್ ಧವನ್ (1)ಮತ್ತು ಮುರಳಿ ವಿಜಯ್ (9)ಅವರಿಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು. ಲೊಕೇಶ್ ರಾಹುಲ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮಿಂಚಲಿಲ್ಲ. ಟೆಸ್ಟ್ ತಂಡಕ್ಕೆ ಹದಿನೈದರ ಬಳಗದಲ್ಲಿ ಸ್ಥಾನ ಪಡೆದಿದ್ದ ದಿಲ್ಲಿಯ ಆರಂಭಿಕ ದಾಂಡಿಗ ಗೌತಮ್ ಗಂಭೀರ್‌ಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ನಿರೀಕ್ಷಿಸಲಾಗಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಅವರು ಧವನ್‌ಗೆ ಅವಕಾಶ ನೀಡಿದರು. ಆದರೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡುವಲ್ಲಿ ಧವನ್ ಎಡವಿದರು. ಐದನೆ ಟೆಸ್ಟ್ ಆಡುತ್ತಿರುವ ಹೆನ್ರಿ ಅವರ 1.4ನೆ ಓವರ್‌ನಲ್ಲಿ ಧವನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಎಡವಿದರು. 21.4ನೆ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಅವರ ವೈಡ್ ಎಸೆತವನ್ನು ಕೆಣಕಲು ಹೋಗಿ ಲಥಾಮ್‌ಗೆ ಕ್ಯಾಚ್ ನೀಡಿದರು.
ರಹಾನೆ -ಪೂಜಾರ ರಕ್ಷಣೆ: ನಾಲ್ಕನೆ ವಿಕೆಟ್‌ಗೆ ಪೂಜಾರ ಮತ್ತು ರಹಾನೆ ತಂಡವನ್ನು ಆಧರಿಸಿ ಜೊತೆಯಾಟದಲ್ಲಿ 141 ರನ್‌ಗಳ ಕೊಡುಗೆ ನೀಡಿದರು. ಮೂರು ಗಂಟೆ ಮತ್ತು 9 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಕಿವೀಸ್ ಬೌಲರ್‌ಗಳನ್ನು ದಂಡಿಸಿದರು.
70ನೆ ಓವರ್‌ನ ಮೊದಲ ಎಸೆತದಲ್ಲಿ ವ್ಯಾಗ್ನೆರ್ ಎಸೆತದಲ್ಲಿ ಗಪ್ಟಿಲ್‌ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 187 ಆಗಿತ್ತು. ರೋಹಿತ್ ಶರ್ಮ 2 ರನ್ ಗಳಿಸಿ ಔಟಾದರು.
ಭಾರತ ತಂಡದ ಮೊತ್ತ 200ಕ್ಕೆ ತಲುಪುವಾಗ ರಹಾನೆ ಅವರನ್ನು ಜೀತನ್ ಪಟೇಲ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಅಶ್ವಿನ್ 26 ರನ್ ಗಳಿಸಿದ್ದಾಗ ಅವರನ್ನು ಹೆನ್ರಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ನ್ಯೂಝಿಲೆಂಡ್ ತಂಡದ ಪರ ಮ್ಯಾಟ್ ಹೆನ್ರಿ 35ಕ್ಕೆ 3 ವಿಕೆಟ್, ಜೀತನ್ ಪಟೇಲ್ 66ಕ್ಕೆ 2 ವಿಕೆಟ್, ಟ್ರೆಂಟ್ ಬೌಲ್ಟ್ ಮತ್ತು ವ್ಯಾಗ್ನೆರ್ ತಲಾ 1 ವಿಕೆಟ್ ಪಡೆದರು.
,,,,,,,,,,,,,,

ಸ್ಕೋರ್ ಪಟ್ಟಿ
ಭಾರತ 86 ಓವರ್‌ಗಳಲ್ಲಿ 239/7
ಶಿಖರ್ ಧವನ್ ಬಿ ಹೆನ್ರಿ                01
ವಿಜಯ್ ಸಿ ವ್ಯಾಟ್ಲಿಂಗ್ ಬಿ ಹೆನ್ರಿ             09
ಸಿ. ಪೂಜಾರ ಸಿ ಗಪ್ಟಿಲ್ ಬಿ ವ್ಯಾಗ್ನೆರ್        87
ಕೊಹ್ಲಿ ಸಿ ಲಥಾಮ್ ಬಿ ಬೌಲ್ಟ್            09
ರಹಾನೆ ಎಲ್‌ಬಿಡಬ್ಲು ಬಿ ಪಟೇಲ್        77
ರೋಹಿತ್ ಸಿ ಲಥಾಮ್ ಬಿ ಪಟೇಲ್        02
ಅಶ್ವಿನ್ ಎಲ್‌ಬಿಡಬ್ಲು ಬಿ ಹೆನ್ರಿ             26
ವೃದ್ದಿಮಾನ್ ಸಹಾ ಔಟಾಗದೆ            14
ಜಡೇಜ ಔಟಾಗದೆ                    00
ಇತರ                        14
ವಿಕೆಟ್ ಪತನ: 1-1, 2-28, 3-46, 4-187, 5-193, 6-200, 7-231
ಬೌಲಿಂಗ್ ವಿವರ
ಬೌಲ್ಟ್        16-8-33-1
ಹೆನ್ರಿ            15-6-35-3
ವ್ಯಾಗ್ನೆರ್        15-5-37-1
ಸ್ಯಾಂಟ್ನೆರ್        19-5-54-0
ಜೀತನ್ ಪಟೇಲ್    21-3-66-2

ಭಾರತ-ನ್ಯೂಝಿಲೆಂಡ್ ಟೆಸ್ಟ್

ಮೊದಲ ದಿನದ ಹೈಲೈಟ್ಸ್

5: ಈ ವರ್ಷದ ಸೆಪ್ಟಂಬರ್‌ನಲ್ಲಿ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಪಂದ್ಯಗಳಲ್ಲಿ 6 ಇನಿಂಗ್ಸ್‌ಗಳಲ್ಲಿ 5ನೆ ಬಾರಿ 50ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ದುಲೀಪ್ ಟ್ರೋಫಿಯಲ್ಲಿ 166, 31 ಹಾಗೂ ಅಜೇಯ 256 ರನ್ ಗಳಿಸಿದ್ದ ಪೂಜಾರ ನ್ಯೂಝಿಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 62 ಹಾಗೂ 78 ರನ್ ಗಳಿಸಿದ್ದರು. ಎರಡನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿದ್ದಾರೆ.

86.55: ಸರಣಿಯ ಎರಡನೆ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ 86.55 ಸರಾಸರಿ ಹೊಂದಿದ್ದಾರೆ. ಈವರೆಗೆ ಸರಣಿಯ ಎರಡನೆ ಟೆಸ್ಟ್ ಪಂದ್ಯದಲ್ಲಿ 11 ಇನಿಂಗ್ಸ್ ಆಡಿರುವ ರಹಾನೆ ಈ ತನಕ ನಾಲ್ಕು ಶತಕ ಹಾಗೂ ನಾಲ್ಕು ಅರ್ಧಶತಕ ಬಾರಿಸಿದ್ದಾರೆ.

1999: ಈಡನ್‌ಗಾರ್ಡನ್ಸ್‌ನಲ್ಲಿ ಈ ಹಿಂದೆ 1999ರಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಅವಧಿಯಲ್ಲಿ ಮೂರು ಹಾಗೂ ಅದಕ್ಕಿಂತ ವಿಕೆಟ್‌ಗಳು ಉರುಳಿದ್ದವು. 1999ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಶುಕ್ರವಾರ ನಡೆದ ನ್ಯೂಝಿಲೆಂಡ್ ವಿರುದ್ಧ 2ನೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಬೆಳಗ್ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ.

 141: ಪೂಜಾರ ಹಾಗೂ ರಹಾನೆ ನಾಲ್ಕನೆ ವಿಕೆಟ್‌ಗೆ 141 ರನ್ ಜೊತೆಯಾಟ ನಡೆಸಿದ್ದಾರೆ. ಈಡನ್‌ಗಾರ್ಡನ್ಸ್‌ನಲ್ಲಿ 4ನೆ ವಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟ ಇದಾಗಿದೆ. 2011-12ರಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ 4ನೆ ವಿಕೆಟ್‌ಗೆ 140 ರನ್ ಸೇರಿಸಿದ್ದರು.

 3/35: ನ್ಯೂಝಿಲೆಂಡ್‌ನ ಮ್ಯಾಟ್ ಹೆನ್ರಿ 2ನೆ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ 35 ರನ್‌ಗೆ 3 ವಿಕೆಟ್ ಪಡೆದಿದ್ದಾರೆ. ಇದು ಟೆಸ್ಟ್‌ನಲ್ಲಿ ಹೆನ್ರಿ ದಾಖಲಿಸಿದ್ದ ಎರಡನೆ ಶ್ರೇಷ್ಠ ಪ್ರದರ್ಶನ. 2015ರಲ್ಲಿ ಲಾರ್ಡ್ಸ್‌ನಲ್ಲಿ 93 ರನ್‌ಗೆ 4 ವಿಕೆಟ್ ಕಬಳಿಸಿದ್ದರು. 7: ಪೂಜಾರ ಕಳೆದ 8 ಇನಿಂಗ್ಸ್‌ನಲ್ಲಿ ಏಳನೆ ಬಾರಿ ಶತಕ ಬಾರಿಸಲು ವಿಫಲರಾಗಿದ್ದಾರೆ. ಪೂಜಾರ ಕೊಲಂಬೊದಲ್ಲಿ ಕೊನೆಯ ಬಾರಿ ಶತಕ ಬಾರಿಸಿದ್ದರು.

87: ವಿರಾಟ್ ಕೊಹ್ಲಿ ಆ್ಯಂಟಿಗುವಾದಲ್ಲಿ ದ್ವಿಶತಕ ಬಾರಿಸಿದ ಬಳಿಕ ಕಳೆದ 6 ಇನಿಂಗ್ಸ್‌ಗಳಲ್ಲಿ ಕೇವಲ 87 ರನ್ ಗಳಿಸಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ 3 ಇನಿಂಗ್ಸ್‌ಗಳಲ್ಲಿ 44, 3, ಹಾಗೂ 4 ರನ್ ಹಾಗೂ ನ್ಯೂಝಿಲೆಂಡ್ ವಿರುದ್ಧ ಸರಣಿಯ 3 ಇನಿಂಗ್ಸ್‌ಗಳಲ್ಲಿ 9, 18 ಹಾಗೂ 9 ರನ್ ಗಳಿಸಿದ್ದರು.

31.53: ಕೊಹ್ಲಿ 2013ರ ಮಾರ್ಚ್‌ನ ಬಳಿಕ ಟೆಸ್ಟ್‌ನಲ್ಲಿ 31.53 ಸರಾಸರಿ ಹೊಂದಿದ್ದು, 2013ರಲ್ಲಿ ಸ್ವದೇಶದಲ್ಲಿ ಕೊನೆಯ ಬಾರಿ ಶತಕ ಬಾರಿಸಿದ್ದರು. ಕೊಹ್ಲಿಗಿಂತ ಆರ್.ಅಶ್ವಿನ್ ಮಾತ್ರ ಕನಿಷ್ಠ ಸರಾಸರಿ(31.30) ಹೊಂದಿದ್ದಾರೆ.

23: ಮೊಹಾಲಿಯಲ್ಲಿ 2013ರ ಮಾರ್ಚ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ 187 ರನ್ ಗಳಿಸಿದ ಬಳಿಕ ಶಿಖರ್ ಧವನ್ ಸ್ವದೇಶಿ ಟೆಸ್ಟ್ ಪಂದ್ಯದಲ್ಲಿ 23 ಸರಾಸರಿ ಹೊಂದಿದ್ದಾರೆ. 2013ರ ಬಳಿಕ ಧವನ್ ಆಡಿರುವ 10 ಇನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕವನ್ನು ಬಾರಿಸಿಲ್ಲ. ಈ ಅವಧಿಯಲ್ಲಿ ಧವನ್‌ರ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 45.

12: ಕೋಲ್ಕತಾದಲ್ಲಿ ನಡೆದ 2ನೆ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದ ಜೀತನ್ ಪಟೇಲ್ ಭಾರತದಲ್ಲಿ ಒಟ್ಟು 12 ವಿಕೆಟ್ ಉರುಳಿಸಿದ್ದಾರೆ. ಪಟೇಲ್ ಭಾರತದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X