ಕ್ವಾರ್ಟರ್‌ಫೈನಲ್‌ನಲ್ಲಿ ಜಯರಾಮ್‌ಗೆ ಸೋಲು
ಕೊರಿಯಾ ಓಪನ್

ಸಿಯೊಲ್,ಸೆ.30: ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಜಯ್ ಜಯರಾಮ್ ಮುಗ್ಗರಿಸುವುದರೊಂದಿಗೆ ಕೊರಿಯಾ ಓಪನ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.
ಶುಕ್ರವಾರ ಇಲ್ಲಿ ನಡೆದ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಅಂತಿಮ -8ರ ಪಂದ್ಯದಲ್ಲಿ ಜಯರಾಮ್ ವಿಶ್ವದ ನಂ.20ನೆ ಆಟಗಾರ ಲೀ ಹಿಯೂನ್ ವಿರುದ್ಧ 44 ನಿಮಿಷಗಳ ಹೋರಾಟದಲ್ಲಿ 23-25, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ವಿಶ್ವದ ನಂ.27ನೆ ರ್ಯಾಂಕಿನ ಆಟಗಾರ ಜಯರಾಮ್ ಒಂದು ಹಂತದಲ್ಲಿ 14-11 ಮುನ್ನಡೆಯಲ್ಲಿದ್ದರು. ಆಗ 7 ಅಂಕ ಗಳಿಸಿದ ಲೀ ಮುನ್ನಡೆ ಸಾಧಿಸಿದರು. ಲೀ 20-17 ಮುನ್ನಡೆಯಲ್ಲಿದ್ದಾಗ ಜಯರಾಮ್ 3 ಅಂಕ ಉಳಿಸಿ 23-22ಕ್ಕೆ ಏರಿದರು. ಆದರೆ, ಅಂತಿಮವಾಗಿ 23-25ರಿಂದ ಸೋತರು.
ಎರಡನೆ ಗೇಮ್‌ನಲ್ಲಿ ಜಯರಾಮ್ ಎಂದಿನಂತೆ ಆಡಲಿಲ್ಲ. ಕೊರಿಯಾದ ಆಟಗಾರ 21-13 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈ ವರ್ಷಾರಂಭದಲ್ಲಿ ನಡೆದ ಕೆನಡಾ ಓಪನ್‌ನಲ್ಲಿ ಜಯರಾಮ್ ಅವರು ಲೀಗೆ ಶರಣಾಗಿದ್ದರು.
Next Story





