ಉಮಾಭಾರತಿ ಬಂಧನಾದೇಶ ರದ್ದು
ಮಾನನಷ್ಟ ಮೊಕದ್ದಮೆ
ಭೋಪಾಲ್, ಸೆ.30: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದಾಖಲಿಸಿರುವ ಮಾನನಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದುದ ಕ್ಕಾಗಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿಯವರ ವಿರುದ್ಧ ಕೆಳ ನ್ಯಾಯಾಲಯ ವೊಂದು ಹೊರಡಿಸಿದ್ದ ಬಂಧನಾದೇಶವನ್ನು ಭೋಪಾಲ್‌ನ ಜಿಲ್ಲಾ ನ್ಯಾಯಾಲಯವಿಂದು ರದ್ದುಪಡಿಸಿದೆ.
ಉಮಾಭಾರತಿಯವರ ಹೇಳಿಕೆಯನ್ನು ವಕೀಲರೊಬ್ಬರ ಮೂಲಕ ದಾಖಲಿಸಿ ಕೊಳ್ಳ ಬಹುದು. ನ್ಯಾಯಾಲಯದಲ್ಲಿ ಅವರ ಉಪಸ್ಥಿತಿ ಅಗತ್ಯವಿಲ್ಲ. ಪ್ರಕರಣವು ಗಂಭೀರ ಸ್ವರೂಪದ್ದಲ್ಲವೆಂಬ ವಕೀಲ ಹರೀಶ್ ಮೆಹ್ತಾರ ವಾದವನ್ನಾಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ವಾರಂಟನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಮ್‌ಕುಮಾರ್ ಚೌಬೆ ರದ್ದುಗೊಳಿಸಿದರು. 13 ವರ್ಷ ಹಳೆಯ ಪ್ರಕರಣದ ಸಂಬಂಧ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಭುಭಸ್ಕರ್ ಯಾದವ್ ಗುರುವಾರ ಮುಂಜಾನೆ ಉಮಾ ಭಾರತಿಯವರ ವಿರುದ್ಧ ವಾರಂಟ್ ಹೊರಡಿ ಸಿದ್ದು, ಅದನ್ನು ಜಾರಿಗೊಳಿಸಿ ಅವರನ್ನು ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ಆದೇಶಿಸಿದ್ದರು.
Next Story





