ಫಿಲಿಪ್ಫೀನ್ಸ್ ಅಧ್ಯಕ್ಷನಿಂದ ಡ್ರಗ್ಸ್ ವ್ಯಸನಿಗಳ ಹತ್ಯೆ ಬೆದರಿಕೆ

ಮನಿಲಾ,ಸೆ.30: ಡ್ರಗ್ಸ್ ಮಾಫಿಯಾದ ವಿರುದ್ಧ ಸಮರ ಸಾರಿರುವ ಫಿಲಿಪ್ಫೀನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟ್ ಶುಕ್ರವಾರ ತನ್ನ್ನನ್ನು ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನೊಂದಿಗೆ ಹೋಲಿಸಿಕೊಂಡಿದ್ದಾರೆ ಹಾಗೂ ದೇಶದಲ್ಲಿರುವ 30 ಲಕ್ಷಕ್ಕೂ ಅಧಿಕ ಮಾದಕದ್ರವ್ಯ ವ್ಯಸನಿಗಳನ್ನು ಹಾಗೂ ದಂಧೆಕೋರರನ್ನು ಹತ್ಯೆಗೈಯಲು ತಾನು ಬಯಸಿರುವುದಾಗಿ ಘೋಷಿಸಿದ್ದಾರೆ. ರೊಡ್ರಿಗೊ ಅವರ ಈ ಹೇಳಿಕೆಗೆ ಅಮೆರಿಕದಲ್ಲಿರುವ ವಿವಿಧ ಯೆಹೂದಿ ಗುಂಪುಗಳಿಂದ ವ್ಯಾಪಕ ಆಘಾತ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಫಿಲಿಪ್ಫೀನ್ಸ್ ಅಧ್ಯಕ್ಷರ ವಿರುದ್ಧ ಕಠಿಣ ಧೋರಣೆ ಅನುಸರಿಸಬೇಕೆಂದು ಅವು ಅಮೆರಿಕ ಸರಕಾರವನ್ನು ಒತ್ತಾಯಿಸಿವೆ. ಇತ್ತೀಚೆಗೆ ಡ್ಯುಟೆರ್ಟ್ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಆಕ್ಷೇಪಕಾರಿಯಾಗಿ ಮಾತನಾಡಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಡ್ಯುಟೆರ್ಟ್ ಅವರ ್ನ ಸರಣಿ ವಿವಾದಾತ್ಮಕ ಹೇಳಿಕೆಗಳಿಂದಾಗಿ ಅಮೆರಿಕ ಹಾಗೂ ವಾಶಿಂಗ್ಟನ್ ನಡುವೆ ಇದ್ದ ನಿಕಟ ಬಾಂಧವ್ಯವು ಹಳಸಿತ್ತು. ವಿಯೆಟ್ನಾಂ ಪ್ರವಾಸದ ಬಳಿಕ ಫಿಲಿಪ್ಪೀನ್ಸ್‌ನ ದಾವಾವೊ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದ ಡ್ಯುಟೆರ್ಟ್, ತನ್ನನ್ನು ವಿರೋಧಿಗಳು ಹಿಟ್ಲರ್‌ನ ದಾಯಾದಿಯೆಂಬಂತೆ ಬಿಂಬಿಸುತ್ತಿ ದ್ದಾರೆಂದರು.





