ಮಂಗಳೂರು ವಿಮಾನ ನಿಲ್ದಾಣದಲ್ಲಿ ಲಕ್ಷಾಂತರ ವೌಲ್ಯದ ಚಿನ್ನ, ಸಿಗರೇಟ್ ವಶ
ಮಂಗಳೂರು, ಸೆ.30: ಇಲ್ಲಿನ ವಿಮಾನ ನಿಲ್ದಾಣದಲ್ಲಿ 52 ಲಕ್ಷ ರೂ. ವೌಲ್ಯದ ಅಕ್ರಮ ಚಿನ್ನ ಹಾಗೂ ವಿದೇಶಿ ಸಿಗರೇಟನ್ನು ವಶ ಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಸೆಪ್ಟಂಬರ್‌ನಲ್ಲಿ ಒಟ್ಟು 18 ಪ್ರಕರಣಗಳಲ್ಲಿ ಸುಮಾರು 52 ಲಕ್ಷ ರೂ. ವೌಲ್ಯದ 1,133.000 ಗ್ರಾಂ ಅಕ್ರಮ ಚಿನ್ನ, ವಿದೇಶಿ ಸಿಗರೇಟ್ ಸೇರಿದಂತೆ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ ದುಬೈಯಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಹಾಗೂ ಅಬುಧಾಬಿಯಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಈ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





