Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇನ್ನಷ್ಟು ಕೋರೆಹಲ್ಲುಗಳಿಗೆ ಮೊರೆ...

ಇನ್ನಷ್ಟು ಕೋರೆಹಲ್ಲುಗಳಿಗೆ ಮೊರೆ ಇಡುತ್ತಿರುವ ತೋಳಗಳು!

ವಾರ್ತಾಭಾರತಿವಾರ್ತಾಭಾರತಿ1 Oct 2016 12:30 AM IST
share
ಇನ್ನಷ್ಟು ಕೋರೆಹಲ್ಲುಗಳಿಗೆ ಮೊರೆ ಇಡುತ್ತಿರುವ ತೋಳಗಳು!

‘‘ತೋಳಗಳು ನಮಗೆ ಇನ್ನಷ್ಟು ಕೋರೆಹಲ್ಲುಗಳು ಬೇಕು ಎಂದು ಒಂದಾಗಿ ಬೀದಿಗಿಳಿದಿವೆ. ಜಿಂಕೆಗಳೋ ಇರುವ ಕೊಂಬನ್ನೂ ಕಳೆದುಕೊಂಡು ಅಳುತ್ತಿವೆ’’ ಸದ್ಯಕ್ಕೆ ಭಾರತದ ಸಾಮಾಜಿಕ ಬೆಳವಣಿಗೆಗಳನ್ನು ಕವಿಯೊಬ್ಬರ ಮೇಲಿನ ಸಾಲುಗಳು ಪರಿಣಾಮಕಾರಿಯಾಗಿ ತೆರೆದಿಡುತ್ತವೆ. ಕೇಂದ್ರದಲ್ಲಿ ಸಂಘಪರಿವಾರದ ಸರಕಾರ ತನ್ನ ಚುಕ್ಕಾಣಿಯನ್ನು ಹಿಡಿದಿರುವ ಸಂದರ್ಭದಲ್ಲೇ, ದೇಶದಲ್ಲಿ ವಿವಿಧ ಜಾತಿಗಳು ತಮ್ಮ ತಮ್ಮ ಗುರುತುಗಳ ಜೊತೆಗೆ ಒಂದಾಗುತ್ತಿವೆ. ಗುಜರಾತಿನಲ್ಲಿ ಪಟೇಲರು ಒಂದಾಗಿ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ ಜಾಟ್‌ಗಳು, ಗುಜ್ಜಾರರು ತಮ್ಮ ತಮ್ಮ ಜಾತಿಯ ಬಲದೊಂದಿಗೆ ಬೀದಿಗಿಳಿದಿದ್ದಾರೆ. ಅವರ ರ್ಯಾಲಿಗಳಿಗೆ, ಬೀದಿ ಹೋರಾಟಗಳಿಗೆ ಕೇಂದ್ರ ಸರಕಾರ ತಲ್ಲಣಿಸಿ ಕೂತಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಮರಾಠರು ಒಂದಾಗಿದ್ದಾರೆ. ತಮಗೆಲ್ಲ ಅನ್ಯಾಯವಾಗಿದೆ ಎನ್ನುವುದು ಇವರೆಲ್ಲರ ಕೂಗು. ‘‘ಮೀಸಲಾತಿಯಿಂದ ನಮಗೆ ಅನ್ಯಾಯವಾಗಿದ್ದು, ನಮ್ಮನ್ನೂ ಮೀಸಲಾತಿಯೊಳಗೆ ಸೇರಿಸಿಕೊಳ್ಳಬೇಕು’’ ಎಂದು ಪಟೇಲರು ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜಾಟರ ಪ್ರತಿಭಟನೆಯಂತೂ ಭೀಕರ ಹಿಂಸೆಗೆ ಕಾರಣವಾಯಿತು. ಇತ್ತೀಚೆಗೆ ಮರಾಠರೂ ಮುಂಬೈಯಲ್ಲಿ ಬೃಹತ್ ವೌನ ಮೆರವಣಿಗೆಯನ್ನು ನಡೆಸಿದರು. ಇವರೆಲ್ಲರ ಬೇಡಿಕೆಗಳಲ್ಲೂ ಸಮಾನತೆಯಿದೆ. ‘‘ನಮಗೆ ಅನ್ಯಾಯವಾಗುತ್ತಿದೆ’’ ಎನ್ನುವುದು ಇವರೆಲ್ಲರ ಹೋರಾಟದೊಳಗಿರುವ ಸಮಾನ ಧ್ವನಿ. ಆದರೆ ಈ ಸಂಘಟನೆ ಅದೆಷ್ಟು ಹುಸಿಯಾದದ್ದು ಎಂದರೆ, ಹೋರಾಟಗಾರರಲ್ಲಿ ‘‘ತಮಗೆ ಆಗಿರುವ ಅನ್ಯಾಯದ ವಿವರಗಳನ್ನು ನೀಡಿ’’ ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಗುಜರಾತ್‌ನಲ್ಲಿ ಪಟೇಲರ ಸಂಖ್ಯೆ ಎಷ್ಟು ದೊಡ್ಡದಿದೆಯೋ ಅದಕ್ಕೆ ಪೂರಕವಾಗಿ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ಅವರಿಗೆ ದೊರಕಿವೆ. ರಾಜಸ್ಥಾನದಲ್ಲಿ ಗುಜ್ಜಾರರು ಮತ್ತು ಜಾಟ್‌ಗಳ ರಾಜಕೀಯ ಶಕ್ತಿಯನ್ನು ನಾವು ಪ್ರಶ್ನಿಸುವಂತೆಯೇ ಇಲ್ಲ. ದುರ್ಬಲ ಸಮುದಾಯಕ್ಕೆ ನೀಡುವ ಮೀಸಲಾತಿಯಿಂದಾಗಿ ಇವರಿಗಾಗಿರುವ ಅನ್ಯಾಯವೇನು ಎಂದು ಪರಿಶೀಲಿಸಿದರೆ, ಈಗಲೂ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಟೇಲರು, ಜಾಟರೇ ಪ್ರಬಲರಾಗಿದ್ದಾರೆ. ಇವರ ತಲೆಯ ಮೇಲೆ ಕುಳಿತು ಯಾವನೇ ಒಬ್ಬ ದಲಿತ ಆಡಳಿತ ನಡೆಸಿರುವ ಉದಾಹರಣೆಗಳಿಲ್ಲ. ಉತ್ತರ ಭಾರತದಲ್ಲಿ ಈ ಜಾತಿಗಳ ಪ್ರಾಬಲ್ಯದ ಮುಂದೆ ತಳಸ್ತರದ ಜನರು ತಲೆಯೆತ್ತುವಂತಹ ಸ್ಥಿತಿಯೇ ಇಲ್ಲ. ಇನ್ನು ಮರಾಠರ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯೇ ಒಬ್ಬ ಮರಾಠಿ. ಮೇಲ್ವರ್ಗದಿಂದ ಬಂದವರು. ಮರಾಠರು ಬರೇ ಮಹಾರಾಷ್ಟ್ರ ಮಾತ್ರವಲ್ಲ, ಅದರಾಚೆಗೆ ತಮ್ಮ ಸೇನೆಯ ಜೊತೆಗೆ ದಾಳಿ ನಡೆಸಿ ಲೂಟಿ, ಪುಂಡಾಟಗಳಿಗೆ ಹೆಸರುವಾಸಿಯಾದವರು. ಈಗಲೂ ಮಹಾರಾಷ್ಟ್ರ ಈ ಮರಾಠಿ ಐಡೆಂಟಿಟಿಯ ಮೂಲಕವೇ ಗುರುತಿಸಲ್ಪಡುತ್ತಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಈ ಮೂರೂ ಕ್ಷೇತ್ರಗಳಲ್ಲಿ ಇವರೇ ಮೇಲುಗೈ ಸಾಧಿಸಿದ್ದಾರೆ. ಹೀಗಿದ್ದರೂ ಇವರೆಲ್ಲ ಒಂದಾಗಿ ಬೀದಿಗಿಳಿದು ಸರಕಾರವನ್ನು ಅಲುಗಾಡಿಸುವುದಕ್ಕೆ ಮುಂದಾಗಿದ್ದಾರೆ. ನಿಜಕ್ಕೂ ಇವರಿಗೆ ಅನ್ಯಾಯವಾಗಿರುವ ಬಗೆಯಾದರೂ ಹೇಗೆ?
 ಇಂದು ಸಾಮಾಜಿಕವಾಗಿ ಸಂಘಟಿತವಾಗುತ್ತಿರುವ ಈ ಮೇಲ್ಜಾತಿಯ ಅಳಲುಗಳಲ್ಲಿ ಒಂದು ಸಮಾನ ಧ್ವನಿಯಿದೆ. ಅದೆಂದರೆ ಮೀಸಲಾತಿ. ಇವರೆಲ್ಲರ ಕಣ್ಣ್ಣು ಮೀಸಲಾತಿಯ ಮೇಲಿದೆ. ‘‘ಈ ದೇಶದ ದುರ್ಬಲ ಅದರಲ್ಲೂ ದಲಿತ ಸಮುದಾಯ ಮೀಸಲಾತಿಯ ಮೂಲಕ ಮೇಲೆದ್ದು ನಿಲ್ಲಲು ಹವಣಿಸುತ್ತಿರುವುದು’’ ಮೇಲಿನ ಎಲ್ಲ ಸಮುದಾಯಗಳಲ್ಲೂ ಅಸಹನೆಯನ್ನು ಸೃಷ್ಟಿಸುತ್ತಿದೆ. ಸ್ವಾತಂತ್ರ ಬಂದು ಅರ್ಧ ಶತಮಾನ ಕಳೆದರೂ, ಮೀಸಲಾತಿಯಿಂದ ಇನ್ನೂ ಘನತೆಯ ಬದುಕನ್ನು ಸಾಗಿಸುವಲ್ಲಿ ದಲಿತರು ಯಶಸ್ವಿಯಾಗಿಲ್ಲ. ಆದರೂ, ಮೇಲ್ಜಾತಿಯ ಜನರು ಇದರ ವಿರುದ್ಧ ದಂಗೆಯೆದ್ದಿದ್ದಾರೆ. ಇಂದು ಪಟೇಲರು, ಮರಾಠರಂತಹ ಮೇಲ್ಜಾತಿಯ ಜನರನ್ನು ಒಂದಾಗಿಸಿರುವುದು ಅವರ ಮೇಲರಿಮೆಯಾಗಿದೆ. ಇಂದು ತಮ್ಮ ಕಾಲ ಬುಡದಲ್ಲಿ ಜೀತ ಮಾಡಿಕೊಂಡು ಇರಬೇಕಾದವರು ನಮ್ಮಂತೆಯೇ ತಲೆಯೆತ್ತಿ ನಿಲ್ಲುವುದು ಈ ಜನರಿಗೆ ‘ತಮಗಾಗಿರುವ ಅನ್ಯಾಯ’ ಎಂಬಂತೆ ಭಾಸವಾಗಿದೆ. ಇದು ಹೀಗೇ ಮುಂದುವರಿದರೆ, ಮುಂದೊಂದು ದಿನ ಇವರು ನಮ್ಮ ಸಮವಾಗಿ ಜೀವನ ಮಾಡಲು ಹವಣಿಸುತ್ತಾರೆ ಎಂಬ ಭಯ ಅವರನ್ನು ಒಟ್ಟು ಸೇರಿಸಿದೆ. ಆದುದರಿಂದಲೇ ತಮ್ಮ ಜನಸಂಖ್ಯೆ, ಜಾತಿ ಮತ್ತು ಆರ್ಥಿಕ ಬಲವನ್ನು ಪ್ರಯೋಗಿಸಿಕೊಂಡು ಸರಕಾರದ ವಿರುದ್ಧ ಒಂದಾಗಿದ್ದಾರೆ. ಇದರ ನೇರ ಪರಿಣಾಮ ಯಾರ ಮೇಲೆ ಬೀಳುತ್ತದೆ ಎನ್ನುವುದನ್ನು ನಾವು ಊಹಿಸಬಹುದಾಗಿದೆ. ಒಂದೋ ಮೀಸಲಾತಿಯನ್ನು ಈ ಮೇಲ್ಜಾತಿಯಗಳಿಗೂ ಹಂಚಬೇಕು ಅಥವಾ ಮೀಸಲಾತಿಯನ್ನೇ ಇಲ್ಲವಾಗಿಸಬೇಕು. ಇವೆರಡರಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಒಂದು ವೇಳೆ ಇವರನ್ನು ಮೀಸಲಾತಿಯೊಳಗೆ ಸೇರಿಸಿದರೆ, ತೋಳಗಳಿಗೆ ಇನ್ನಷ್ಟು ಕೋರೆಹಲ್ಲುಗಳನ್ನು ನೀಡಿದಂತೆ. ಅಂತೆಯೇ ಮೀಸಲಾತಿಯನ್ನೇ ತೆಗೆದುಹಾಕಿದರೆ, ಜಿಂಕೆಗಳ ಇರುವ ಕೊಂಬುಗಳನ್ನೂ ಕಿತ್ತು ಹಾಕಿದಂತೆ.
   ಇಂದು ದೇಶ ಎರಡು ಅಪಾಯಗಳನ್ನು ಎದುರಿಸುತ್ತಿದೆ. ಒಂದೆಡೆ ದುರ್ಬಲರ ಮೇಲಿನ ಹಲ್ಲೆಗಳು, ದೌರ್ಜನ್ಯಗಳು ಹೆಚ್ಚುತ್ತಿವೆ. ದಲಿತರನ್ನು ಮತ್ತೆ ಹಳೆಯ ಪರಂಪರಾಗತವಾದ ವೃತ್ತಿಯನ್ನು ಮಾಡಿ ಬದುಕುವಂತೆ ಒತ್ತಾಯಿಸಲಾಗುತ್ತಿದೆ. ಸತ್ತ ದನದ ವಿಲೇವಾರಿ ಮಾಡದ ಕುಟುಂಬವನ್ನು ಬರ್ಬರವಾಗಿ ಹಲ್ಲೆ ಮಾಡಲಾಗುತ್ತದೆ ಮತ್ತು ಗರ್ಭಿಣಿ ಮಹಿಳೆಯ ಹೊಟ್ಟೆಗೆ ತುಳಿಯಲಾಗುತ್ತದೆ. ದನದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಬರ್ಬರ ದಾಳಿಗಳು ನಡೆಯುತ್ತಿವೆ. ಎರಡನೆ ಅಪಾಯವೆಂದರೆ, ಈ ದಾಳಿ ನಡೆಸುತ್ತಿರುವ ಮೇಲ್ಜಾತಿಗಳೇ ಮತ್ತೆ ಬೀದಿಗಿಳಿದು ‘ನಮಗೆ ಅನ್ಯಾಯವಾಗುತ್ತಿದೆ’ ಎಂದು ಸಂಘಟಿತವಾಗುತ್ತಿವೆ. ಸರಕಾರದ ಮೇಲೆ ಒತ್ತಡ ಹೇರಿ, ಪ್ರಜಾಸತ್ತೆಯನ್ನು ತಮ್ಮ ಮೂಗಿನ ನೇರಕ್ಕೆ ಸರಿಪಡಿಸಲು ಯತ್ನಿಸುತ್ತಿವೆ. ಅಸಂಘಟಿತರಾಗಿ ಚದುರಿರುವ ತಳಸ್ತರದ ಜನರು ಒಂದೆಡೆ. ಸಂಘಟಿತರಾಗಿ ಬೀದಿಗಿಳಿದು ತಳಸ್ತರದ ಜನರಲ್ಲಿ ಬೆದರಿಕೆಯನ್ನು ಹುಟ್ಟಿಸುತ್ತಿರುವ ಮೇಲ್ಜಾತಿಯ ಜನರು ಇನ್ನೊಂದೆಡೆ. ಇದು ದೇಶಾದ್ಯಂತ ಸದ್ಯ ನಡೆಯುತ್ತಿರುವ ಬೆಳವಣಿಗೆಗಳಾಗಿವೆ. ಇದೇ ಸಂದರ್ಭದಲ್ಲಿ ಬ್ರಾಹ್ಮಣ್ಯ ಮನಸ್ಸುಗಳು ಇವೆಲ್ಲವನ್ನೂ ತಮಗೆ ಪೂರಕವಾಗಿ ಹಿಂದುತ್ವದ ಹೆಸರಿನಲ್ಲಿ ಬಳಸಿಕೊಳ್ಳುತ್ತಿವೆ. ಆರೆಸ್ಸೆಸ್‌ನಲ್ಲಿರುವ ಶೂದ್ರ ಜನರನ್ನೆಲ್ಲ ಬ್ರಾಹ್ಮಣ್ಯದ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿವೆ. ಇದು ದಲಿತರು ಮತ್ತು ಶೋಷಿತರ ಪಾಲಿನ ಇನ್ನೊಂದು ಅಪಾಯ. ಇಂತಹ ಸಂದರ್ಭದಲ್ಲೇ ಉನಾದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ನೆಪವಾಗಿಸಿಕೊಂಡು, ಶೋಷಿತ ಜನರು ಸಂಘಟಿತರಾಗತೊಡಗಿದರು. ಇತ್ತೀಚೆಗೆ ಉನಾದಲ್ಲಿ ನಡೆದ ಸಮಾವೇಶದಲ್ಲಿ ‘‘ದನದ ವಿಲೇವಾರಿ ಮಾಡುವುದಿಲ್ಲ’’ ಎಂದು ಶಪಥ ಗೈದು ಮೇಲ್ಜಾತಿಯ ಜನರ ವಿರುದ್ಧ ಬೃಹತ್ ಸವಾಲನ್ನೇ ಹಾಕಿದರು. ಈ ಸವಾಲನ್ನು ಅನುಷ್ಠಾನಕ್ಕೆ ತರಬೇಕಾದಲ್ಲಿ, ಕೆಳವರ್ಗದ ಜನರು ಸಂಘಟಿತರಾಗುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮೇಲ್ಜಾತಿಯ ಜನರ ದೌರ್ಜನ್ಯ, ಹಿಂಸೆ ಇನ್ನಷ್ಟು ತೀವ್ರವಾಗಲಿದೆ. ಉನಾ ಚಳವಳಿ ಮುಂದುವರಿದು, ದೇಶಾದ್ಯಂತವಿರುವ ವಿವಿಧ ದುರ್ಬಲ, ಜಾತಿ, ಸಮುದಾಯಗಳ ಜೊತೆಗೆ ಕೈಗೆ ಕೈ ಸೇರಿಸಿಕೊಳ್ಳದೇ ಇದ್ದರೆ, ಈ ದೇಶದ ತಳಸ್ತರದ ಜನರ ಬದುಕು 50 ವರ್ಷಗಳ ಹಿಂದಕ್ಕೆ ಚಲಿಸಿ ಬಿಡುತ್ತದೆ.
ಶೋಷಿತ ಜನರು ಒಂದಾಗಿ ಬೀದಿಗಿಳಿಯುವುದು ಪ್ರಜಾಸತ್ತೆಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗುಜರಾತ್‌ನ ಉನಾ, ದಿಲ್ಲಿಯ ವಿದ್ಯಾರ್ಥಿ ಚಳವಳಿ ಹಾಗೆಯೇ ರಾಜ್ಯದಲ್ಲಿ ನಡೆಯುತ್ತಿರುವ ಉಡುಪಿ ಚಲೋ ಮಹತ್ವದ್ದಾಗಿದೆ. ಈ ಚಳವಳಿಗಳನ್ನು ಇನ್ನಷ್ಟು ಬೆಳೆಸುವ ಮೂಲಕ ನಮ್ಮ ಸಂವಿಧಾನ ಮತ್ತು ಪ್ರಜಾಸತ್ತೆಯ ಆಶೋತ್ತರಗಳಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಇಲ್ಲವಾದರೆ ಪ್ರಜಾಸತ್ತೆಯ ಹೆಸರಿನಲ್ಲೇ, ಎಲ್ಲ ಅಧಿಕಾರಿಗಳೂ ಮತ್ತೆ ಬಲಾಢ್ಯರ ಕೈವಶವಾಗುವ ದಿನ ದೂರವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X