ಭಾರತ-ಪಾಕ್ ಸಂಘರ್ಷ: ಮಧ್ಯಸ್ಥಿಕೆಗೆ ವಿಶ್ವ ಸಂಸ್ಥೆ ಸಿದ್ಧ ?

ನ್ಯೂಯಾರ್ಕ್,ಅಕ್ಟೋಬರ್ 1: ಭಾರತ-ಪಾಕಿಸ್ತಾನ ಸಂಘರ್ಷ ಪರಿಹಾರಕ್ಕಾಗಿ ಮಧ್ಯಪ್ರವೇಶಿಸಲು ತಾನು ಸಿದ್ಧ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ಕಿಮೂನ್ ಹೇಳಿದ್ದಾರೆ. ಎರಡುರಾಷ್ಟ್ರಗಳು ಗರಿಷ್ಠ ಸಂಯಮವನ್ನು ಪಾಲಿಸಬೇಕೆಂದು ವಲಯದಲ್ಲಿರುವ ಅಶಾಂತಿಯನ್ನು ಪರಿಹರಿಸಲು ಉಚಿತವಾದ ಕ್ರಮಗಳನ್ನು ಸ್ವೀಕರಿಸಬೇಕೆಂದು ಬಾನ್‌ಕಿಮೂನ್ ತಿಳಿಸಿದ್ದಾರೆಂದು ವರದಿಯಾಗಿದೆ.
ಸಂಘರ್ಷ ಪರಿಹಾರಕ್ಕೆ ಕೂಡಲೇ ಕ್ರಮ ಜರಗಿಸಬೇಕಾಗಿದೆ. ಹೊಸ ಘಟನೆಗಳ ಬೆಳವಣಿಗೆಯ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಬೆಳೆದು ಬರುತ್ತಿರುವ ಸಂಘರ್ಷಾವಸ್ಥೆ ಕುರಿತು ಮೂನ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ.ಸೆ. ಹದಿನೆಂಟರ ಉರಿ ಭಯೋತ್ಪಾದನಾ ದಾಳಿಮತ್ತು ಉಭಯದೇಶಗಳ ಗಡಿಯಲ್ಲಿ ಕದನವಿರಾಮ ಒಪ್ಪಂದದ ಉಲ್ಲಂಘನೆ ಕುರಿತು ಕೂಡಾ ಅವರು ಆತಂಕವನ್ನು ಸೂಚಿಸಿದ್ದಾರೆ.
ಉಭಯ ದೇಶಗಳು ಒಪ್ಪುವುದಾದರೆ ಕಾಶ್ಮೀರ ಸಹಿತ ಎಲ್ಲ ವಿಷಯಗಳಲ್ಲಿ ಶಾಂತಿ ತರಲು ರಾಜತಾಂತ್ರಿಕ ಚರ್ಚೆಗಳನ್ನು ನಡೆಸಲು ಸಿದ್ಧ ಎಂದು ಬಾನ್‌ಕಿ ಮೂನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಷ್ಯವೂ ಆಗ್ರಹಿಸಿದೆ. ಉಭಯರಾಷ್ಟ್ರಗಳ ನಡುವೆ ಒಗ್ಗಟ್ಟು ಶಾಂತಿ ನೆಲಸಲಿಕ್ಕಾಗಿ ತೆರೆದ ಚರ್ಚೆಗಳು ನಡೆಯಬೇಕೆಂದು ರಷ್ಯದ ವಿದೇಶ ಸಚಿವಾಲಯ ಪ್ರತಿಕ್ರಿಯಿಸಿದೆ. ಈ ನಡುವೆ ಗಡಿ ನಿಯಂತ್ರಣರೇಖೆಯಲ್ಲಿ ಪಾಕಿಸ್ತಾನ ಪುನಃ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಇಂಧು ಬೆಳಗ್ಗೆ ಭಾರತದ ಪೋಸ್ಟ್‌ಗಳ ಮೇಲೆ ಪಾಕ್ ಸೇನೆ ಗುಂಡುಹಾರಾಟ ನಡೆಸಿದೆ ಎಂದು ವರದಿಯಾಗಿದೆ.







