ಮಂಗಳೂರು ದಸರಾಗೆ ಚಾಲನೆ

ಮಂಗಳೂರು, ಅ.1: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಇಂದಿನಿಂದ ಆರಂಭಗೊಂಡ ನವರಾತ್ರಿ ಉತ್ಸವ ಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಬ್ಬವನ್ನು ಸಂಪ್ರದಾಯ ಪ್ರಕಾರ ಶಿಸ್ತಿನಿಂದ ಆಚರಿಸಬೇಕು ಎಂದು ವಿನಂತಿಸಿದರು. ಮಂಗಳೂರಿನಲ್ಲಿ ನಡೆಯುವ ನವರಾತ್ರಿ ಉತ್ಸವ ಮತ್ತು ದಸರ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಕ್ರಮ ಗಳ ಆಯೋಜಕರು ಮತ್ತು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ವಕ್ತಾರ ಹರಿಕೃಷ್ಣ ಬಂಟ್ವಾಳ, ದೇಶದಲ್ಲಿಯೆ ವಿಶಿಷ್ಟ ವಾಗಿ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಮತ್ತು ದಸರ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವ ದಲ್ಲಿ 21 ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ಇದರಲ್ಲಿ 11 ಲಕ್ಷ ಎಲ್ ಇ ಡಿ ಬಲ್ಬ್ ಗಳನ್ನು ಹಾಕಲಾಗಿದೆ ಎಂದರು.
ನವರಾತ್ರಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ದೇವಸ್ಥಾನದ ಪ್ರಮುಖರಾದ ಎಚ್.ಎಸ್. ಸಾಯಿರಾಂ, ಪದ್ಮರಾಜ್ ಆರ್., ಉರ್ಮಿಳಾ ರಮೇಶ್ ಕುಮಾರ್, ಬಿ.ಕೆ.ತಾರನಾಥ, ರವಿಶಂಕರ್ ಮಿಜಾರ್, ಬಿ.ಜಿ.ಸುವರ್ಣ, ಮಾಲತಿ ಜನಾರ್ದನ ಪೂಜಾರಿ ,ಶೇಖರ್ ಪೂಜಾರಿ, ರಾಧಾಕೃಷ್ಣ ಮೊದಲಾದ ವರು ಉಪಸ್ಥಿತರಿದ್ದರು.





