ಪಾಕ್ ವಶದಲ್ಲಿರುವ ಭಾರತದ ಸೈನಿಕ ಚಂದೂ ಬಾಬುಲಾಲ್ ಕುರಿತು ಹೀಗೊಂದು ಸುದ್ದಿ !

ಹೊಸದಿಲ್ಲಿ, ಅ.1: ಭಾರತದ ಸೇನಾ ಜವಾನ ಚಂದೂಬಾಬು ಲಾಲ್ ಕುರಿತು ಹೀಗೊಂದುಸುದ್ದಿ ಹರಿದಾಡುತ್ತಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಗಡಿಯಲ್ಲಿ ಸೆರೆಸಿಕ್ಕುವ ಮೊದಲು ತನ್ನ ಸೀನಿಯರ್ ಅಧಿಕಾರಿಯಿಂದ ಕೋಪಗೊಂಡು ರಾಷ್ಟ್ರೀಯ ರೈಫಲ್ ನ ಚಂದೂ ಬಾಬುಲಾಲ್ ಎಲ್‌ಒಸಿ ಕಡೆಗೆ ಹೋಗಿದ್ದರು ಎಂದು ಪಂಜಾಬ್ ಕೇಸರಿ ವರದಿಮಾಡಿದೆ.
ಹಿರಿಯ ಅಧಿಕಾರಿಯಿಂದ ಕೋಪದಿಂದ ಹೀಗೆ ಮಾಡಿದ್ದಾರೆ:
ವರದಿಯಾಗಿರುವ ಪ್ರಕಾರ ಚಂದೂ ಗುರವಾರ ಮಧ್ಯಾಹ್ನ ತನ್ನ ಹಿರಿಯ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದು ನಂತರ ಕೋಪದಿಂದ ಎಲ್‌ಒಸಿಯೆಡೆಗೆ ಹೋಗಿದ್ದಾರೆ. ಆವೇಳೆ ಅವರೊಂದಿಗೆ ಆಯುಧಗಳೂ ಇದ್ದವು. ಎಲ್‌ಒಸಿಯೆಡೆಗೆ ಹೋಗುತ್ತಿದ್ದ ಚಂದೂರನ್ನು ಅವರ ಸಂಗಡಿಗರು ಅತ್ತ ಹೋಗದಂತೆ ಎಚ್ಚರಿಸಿದ್ದಾರೆ. ಆದರೆ ಅವ್ಯಾವದನ್ನೂ ಕೇರ್ ಮಾಡದೆ ಹೋಗಿದ್ದಾರೆ. ಎಲ್‌ಒಸಿ ಬಳಿ ಪಾಕಿಸ್ತಾನಿ ಸೈನಿಕರು ಕೂಡಲೇ ಅವರನ್ನು ಸೆರೆಹಿಡಿದಿದ್ದಾರೆ.
ಶೋಕದಿಂದ ಅಜ್ಜಿಯ ಮೃತ್ಯು:
ಈ ನಡುವೆ ಪಾಕಿಸ್ತಾನ ಸೇನೆಯವಶವಾಗಿದ್ದಾರೆ ಎಂದು ತಿಳಿದು ಆಘಾತಗೊಂಡಿದ್ದ ಚಂದೂರ ಅಜ್ಜಿ ಲೀಲಾಬಾಯಿ ಚಿಂದಾ ಪಾಟೀಲ್ ಗುರುವಾರ ರಾತ್ರಿ ಹೃದಯಾಘಾತದಿಂದ ಮೃತರಾಗಿದ್ದಾರೆ. 23ವರ್ಷದ ಚಂದೂ ಬಾಬುಲಾಲ್ ಮಹಾರಾಷ್ಟ್ರದ ಧುಲೆ ಜಿಲ್ಲೆಯ ವೋರ್‌ಬೀರ್‌ನವರು. ಅವರ ತಂದೆಯ ಹೆಸರು ಬಾಶನ್ ಚೌಹಾನ್. ಅವರು 37ನೆ ರಾಷ್ಟ್ರೀಯ ರೈಫಲ್‌ನಲ್ಲಿಜವಾನ ಆಗಿದ್ದಾರೆ. ಅವರ ಸಹೋದರ ಕೂಡಾ ಸೇನೆಯಲ್ಲಿದ್ದಾರೆ. ಇದೀಗ ಗುಜರಾತ್‌ನಲ್ಲಿ ಕರ್ತವ್ಯದಲ್ಲಿದ್ದಾರೆ.
ಸೈನಿಕನನ್ನು ಮರಳಿ ಕರೆತರುವುದಕ್ಕೆ ಸಂಪೂರ್ಣ ಪ್ರಯತ್ನ ನಡೆಸುತ್ತಿರುವ ರಾಜನಾಥ್ ಸಿಂಗ್:
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಜಮ್ಮುಕಾಶ್ಮೀರದಲ್ಲಿ ಪ್ರಮಾದವಶಾತ್ ಗಡಿದಾಟಿ ಪಾಕಿಸ್ತಾನದ ಸೈನಿಕರಿಗೆ ಸಿಕ್ಕಿಬಿದ್ದಿರುವ ಭಾರತೀಯ ಸೈನಿಕನ್ನು ವಾಪಸು ಕರೆತರುವುದಕ್ಕಾಗಿ ಸಾಧ್ಯವಳ್ಳ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಸುರಕ್ಷಾ ಸ್ಥಿತಿಯನ್ನು ತಿಳಿಯಲಿಕ್ಕಾಗಿ ಕರೆಯಲಾದ ಉನ್ನತ ಮಟ್ಟದ ಬೈಠಕ್ ನಂತರ ಪತ್ರಕರ್ತರೊಂದಿಗೆ ಮಾತಾಡುತ್ತಾ ಈ ವಿಷಯವನ್ನು ತಿಳಿಸಿದ್ದಾರೆ.
ಈ ಸೈನಿಕನನ್ನು(ಚಂದೂ) ವಾಪಸು ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.ಸರಕಾರ ಮಟ್ಟದಲ್ಲಿಯೂ ಈ ವಿಚಾರವನ್ನು ಪಾಕಿಸ್ತಾನದ ಮುಂದೆ ಪ್ರಸ್ತಾಪಿಸಲಾಗುವುದು ಎಂದು ರಾಜ್‌ನಾಥ್ ಹೇಳಿದ್ದಾರೆ. ಕೇಂದ್ರ ಗೃಹ ರಾಜ್ಯ ಸಚಿವ ಹಂಸರಾಜ್ ಆಹಿರ್ ಈ ಸೈನಿಕನನ್ನು ಬಿಡಿಸಲಿಕ್ಕಾಗಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆಂದು ವರದಿ ತಿಳಿಸಿದೆ.







