ಏಜ್ ಮಂಗಳೂರು ವತಿಯಿಂದ ವಿಶ್ವ ಹಿರಿಯರ ದಿನಾಚರಣೆ

ಮಂಗಳೂರು, ಅ.1: ಏಜ್ ಮಂಗಳೂರು ಆಶ್ರಯದಲ್ಲಿ ನಗರದ ರೋಶನಿಲಯ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಹಿರಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಪ್ರಭಾ ಅಧಿಕಾರಿ ಎಂ.ಆರ್., ಸೈಂಟ್ ಆ್ಯನ್ಸ್ ಕಾಲೇಜ್ ಅಫ್ ಎಜುಕೇಷನ್‌ನ ನಿವೃತ್ತ ಪ್ರಾಂಶುಪಾಲ ಪ್ರೊ. ಅಮೀರ್ ಹಸನ್ ಅರ್ಕುಲ, ಮಂಗಳೂರು ಸೀನಿಯರ್ ಸಿಟಿಜನ್ ಅಸೋಸಿಯೇಷನ್‌ನ ಕಾರ್ಯದರ್ಶಿ ಕೆ.ರಮೇಶ್ ರಾವ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಏಜ್ ಮಂಗಳೂರು ಅಧ್ಯಕ್ಷ ಕೆ.ಎನ್. ಮಂಜುನಾಥ್, ಕಾರ್ಯದರ್ಶಿ ಝಹೀದ್ ಹುಸೈನ್ ಬಜಿ, ಕೋಶಾಧಿಕಾರಿ ಎಂ. ರಾಘವನ್ ಉಪಸ್ಥಿತರಿದ್ದರು.
Next Story





