ಸೋಶಿಯಲ್ ಡೆಮಾಕ್ರೆಟಿಕ್ ಆಟೊ ಯೂನಿಯನ್‌ನ ಸಮಾಲೋಚನಾ ಸಭೆ

ಮಂಗಳೂರು, ಅ.1: ಸೋಶಿಯಲ ಡೆಮಾಕ್ರೆಟಿಕ್ ಆಟೊ ಯೂನಿಯನ್‌ನ ಸಮಾಲೋಚನಾ ಸಭೆಯು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿ ನಡೆಯಿತು.
ಸಭೆಯಲ್ಲಿ ರಾಜ್ಯ ಸಮಿತಿ ರಚನೆ ಹಾಗೂ ನೊಂದಾವಣೆ ಬಗ್ಗೆ ಚರ್ಚಿಸಲಾಯಿತು. ಆಟೊ ಚಾಲಕರಿಗೆ ಬ್ಯಾಡ್ಜ್ ನೀಡುವ ಕಾನೂನು ನಿಯಮ ಸರಳೀಕರಣದ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಮಾಡಲಾಯಿತು. ಹಾಗೂ ಪ್ರತೀ ಜಿಲ್ಲೆಗಳಲ್ಲೂ ಎಸ್‌ಡಿಎಯು ಸ್ಥಾಪನೆ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಎಸ್‌ಡಿಯು ರಾಜ್ಯಾದ್ಯಕ್ಷ ಜಲೀಲ್ ಕೆ. ಹಾಗೂ ಪ್ರದಾನ ಕಾರ್ಯದರ್ಶಿಯಾದ ಫಝಲುಲ್ಲಾ ಎಂ.ಎ. ಹಾಗೂ ವಿವಿದ ಜಿಲ್ಲೆಗಳಿಂದ ಆಗಮಿಸಿದ ಆಟೊ ಯೂನಿಯನ್ ಜಿಲ್ಲಾ ನಾಯಕರು ಭಾಗವಹಿಸಿದ್ದರು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಉಪಸ್ಥಿತರಿದ್ದರು.
Next Story





