ಎರಡನೆ ಟೆಸ್ಟ್ :ಭುವಿ ದಾಳಿಗೆ ತತ್ತರಿಸಿದ ಕಿವೀಸ್ 128/7

ಕೋಲ್ಕತಾ, ಅ.01: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ವೇಗಿ ಭುವನೇಶ್ವರ ಕುಮಾರ್ ದಾಳಿಗೆ ತತ್ತರಿಸಿದೆ. ಎರಡನೆ ದಿನದಾಟದಂತ್ಯಕ್ಕೆ 34 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಿದೆ.
ಎರಡನೆ ದಿನದ ಆಟ ನಿಂತಾಗ ನ್ಯೂಝಿಲೆಂಡ್‌ನ ವಿಕೆಟ್ ಕೀಪರ್ ಬಿಜೆ ವ್ಯಾಟ್ಲಿಂಗ್ 12 ರನ್ ಮತ್ತು ಜೀತನ್ ಪಟೇಲ್ 5ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಭಾರತದ ಭುವನೇಶ್ವರ ಕುಮಾರ್(33ಕ್ಕೆ5) , ಮಹಮ್ಮದ್ ಶಮಿ(46ಕ್ಕೆ 1) ಮತ್ತು ರವೀಂದ್ರ ಜಡೇಜ (17ಕ್ಕೆ1) ದಾಳಿಯನ್ನು ಎದುರಿಸಲು ಪರದಾಡಿದ ನ್ಯೂಝಿಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.
ಹಂಗಾಮಿ ನಾಯಕ ರಾಸ್ ಟೇಲರ್ (36) ಮತ್ತು ಲ್ಯುಕ್ ರೊಂಚಿ (35) ತಂಡದ ಗರಿಷ್ಠ ಸ್ಕೋರ್ ದಾಖಲಿಸಿದರು
ಭಾರತ 316: ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 104.5 ಓವರ್‌ಗಳಲ್ಲಿ 316 ರನ್‌ಗಳಿಗೆ ಆಲೌಟಾಗಿತ್ತು. ಮೊದಲ ದಿನದಾಟದ ಅಂತ್ಯಕ್ಕೆ 14 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ವೃದ್ದಿಮಾನ್ ಸಹಾ ಮತ್ತು ಖಾತೆ ತೆರೆಯದ ರವೀಂದ್ರ ಜಡೇಜ ಬ್ಯಾಟಿಂಗ್ ಮುಂದುವರಿಸಿ ಎಂಟನೆ ವಿಕೆಟ್‌ಗೆ 41 ರನ್ ಸೇರಿಸಿದರು. ಸಹಾ ಅಜೇಯ 54 ರನ್ ಗಳಿಸಿದರು. ರವೀಂದ್ರ ಜಡೆಜ 14 ರನ್, ಭುವನೇಶ್ವರ ಕುಮಾರ್ 5 ರನ್ ಮತ್ತು ಮುಹಮ್ಮದ್ ಶಮಿ 14 ರನ್ ಗಳಿಸಿ ಔಟಾದರು.
ನ್ಯೂಝಿಲೆಂಡ್‌ನ ಹೆನ್ರಿ 46ಕ್ಕೆ 3, ಬೌಲ್ಟ್ , ವ್ಯಾಗ್ನೆರ್ ಮತ್ತು ಜೆ.ಎಸ್ ಪಟೇಲ್ ತಲಾ 2 ವಿಕೆಟ್, ಸ್ಯಾಂಟ್ನೆರ್ 1 ವಿಕೆಟ್ ಹಂಚಿಕೊಂಡರು.





