ಸ್ಕೂಟಿ ಪಲ್ಟಿ :ಉಪನ್ಯಾಸಕಿಗೆ ಗಾಯ
ಪುತ್ತೂರು, ಅ.1: ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸ್ಕೂಟಿಯೊಂದು ಮಗುಚಿ ಬಿದ್ದು ಉಪನ್ಯಾಸಕಿಯೊಬ್ಬರು ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಪುತ್ತೂರು ನಗರದ ಹೊರವಲಯದ ಗೋಳಿಕಟ್ಟೆ ನಿವಾಸಿ ಅಶೋಕ್.ಬಿ.ಕೆ ಎಂಬವರ ಪತ್ನಿ, ಪುತ್ತೂರು ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಉಪನ್ಯಾಸಕಿ ನೈನಾ (40) ಗಾಯಗೊಂಡವರು.
ನೈನಾ ಅವರು ಶುಕ್ರವಾರ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ತೆರಳಿ, ಹಿಂದಿರುಗುತ್ತಿದ್ದ ವೇಳೆ ಅವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿ ಮುಖ್ಯ ರಸ್ತೆಯಲ್ಲಿ ಜಿ.ಎಲ್.ಕಾಂಪ್ಲೆಕ್ಸ್ ಎದುರು ಪಲ್ಟಿಯಾಯಿತೆಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





