ಸ್ಕಾಟ್ಲೆಂಡ್‌ನ ಬಾಕ್ಸರ್ ಮೈಕ್ ಟವೆಲ್ " ಗ್ಲಾಸ್ಗೋ ಫೈಟ್ 'ನಲ್ಲಿ ಸಾವು

ಲಂಡನ್, ಅ.1: ಗ್ಲಾಸ್ಗೋದಲ್ಲಿ ಬಾಕ್ಸಿಂಗ್ ಸ್ಪರ್ಧಾ ಕಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕಾಟ್ಲೆಂಡ್‌ನ ಯುವ ಬಾಕ್ಸರ್ ಮೈಕ್ ಟವೆಲ್ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ ಗ್ಲಾಸ್ಗೋದ ರಾಡಿಸ್ಸನ್ ಬ್ಲೂ ಹೋಟೆಲ್‌ನಲ್ಲಿ ಸೈಂಟ್ ಆ್ಯಂಡ್ರೋಸ್ ಸ್ಪೋರ್ಟಿಂಗ್ ಕ್ಲಬ್‌ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಡೇಲ್ ಇವಾನ್ಸ್ ವಿರುದ್ಧ ಸೆಣಸಾಟದಲ್ಲಿ ಗಂಭೀರ ಗಾಯಗೊಂಡಿದ್ದರು.
ಇಪ್ಪತ್ತನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಹೋರಾಟದಲ್ಲಿದ್ದ 25 ಹರೆಯದ ಟವೆಲ್ ಶುಕ್ರವಾರ ರಾತ್ರಿ ಮೃತಪಟ್ಟಿರುವುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಬಾಕ್ಸಿಂಗ್‌ನ ಐದನೆ ಸುತ್ತಿನಲ್ಲಿ ಟವೆಲ್ ಅವರಿಗೆ ಗಂಭೀರ ಗಾಯವಾಗಿತ್ತು. ಮೆದುಳಿಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Next Story





