Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಂಗಳೂರಿಗೆ ಕಾರ್ಪ್ ಬ್ಯಾಂಕ್ ಮುಖ್ಯ...

ಬೆಂಗಳೂರಿಗೆ ಕಾರ್ಪ್ ಬ್ಯಾಂಕ್ ಮುಖ್ಯ ಕಚೇರಿ; ನಿರ್ಧಾರಕ್ಕೆ ವಿರೋಧ

ಶೀತವಾದರೆ ಮೂಗನ್ನೇ ಕೊಯ್ಯಬೇಕೆ ಸಿಬ್ಬಂದಿ, ಗ್ರಾಹಕರ ಪ್ರಶ್ನೆ

ಬಿ.ಬಿ. ಶೆಟ್ಟಿಗಾರ್ಬಿ.ಬಿ. ಶೆಟ್ಟಿಗಾರ್1 Oct 2016 7:14 PM IST
share
ಬೆಂಗಳೂರಿಗೆ ಕಾರ್ಪ್ ಬ್ಯಾಂಕ್ ಮುಖ್ಯ ಕಚೇರಿ; ನಿರ್ಧಾರಕ್ಕೆ ವಿರೋಧ

# ಶೀತವಾದರೆ ಮೂಗನ್ನೇ ಕೊಯ್ಯಬೇಕೆ ಸಿಬ್ಬಂದಿ, ಗ್ರಾಹಕರ ಪ್ರಶ್ನೆ

# 110 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ನಷ್ಟ

# ಶೇರುದಾರರಿಗೆ ಡಿವಿಡೆಂಡ್ ಘೋಷಿಸಲು ವಿಫಲವಾದ ಬ್ಯಾಂಕ್

# ಮಂಗಳೂರಿನ ಮುಖ್ಯಕಚೇರಿಯನ್ನು ತರಬೇತಿ ಕೇಂದ್ರವಾಗಿ ಬಳಸುವುದು ‘ಡೆಡ್ ಇನ್ವೆಸ್ಟ್‌ಮೆಂಟ್’

# ‘ಸ್ಮಾರ್ಟ್‌ಸಿಟಿ’ಯಾಗಲಿರುವ ಮಂಗಳೂರು ಬಿಡುವುದು ಬೇಡ: ಸಿಬ್ಬಂದಿ ಇಂಗಿತ

ಉಡುಪಿ, ಅ.1: 110 ವರ್ಷಗಳ ಹಿಂದೆ ಉಡುಪಿಯಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭಗೊಂಡು ಇಂದು ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಕಾರ್ಪೋರೇಷನ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾಯಿಸುವ ಆಡಳಿತ ಮಂಡಳಿಯ ಇತ್ತೀಚಿನ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕಾರ್ಪೋರೇಷನ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಒ ಜೆ.ಕೆ. ಗರ್ಗ್ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕಾರ್ಪೋರೇಷನ್ ಬ್ಯಾಂಕಿನ ಶೇರುದಾರರ ಸಭೆಯಲ್ಲಿ, 1961ರಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಕುರಿತಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಇಲ್ಲೇ ಬೆಳೆದ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಬಳಿಕ ಕೊನೆಯದಾದ ಕಾರ್ಪೋರೇಷನ್ ಬ್ಯಾಂಕ್ ಸಹ ಇದೀಗ ತನ್ನ ಕಾರ್ಪೋರೇಟ್ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದಂತಾಗಿದೆ.

1906ರಲ್ಲಿ ಉಡುಪಿಯಲ್ಲಿ ಹುಟ್ಟಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರನ್ನು ಕೇಂದ್ರವಾಗಿಸಿಕೊಂಡು ದೇಶದ ಮುಂಚೂಣಿ ಬ್ಯಾಂಕುಗಳ ಲ್ಲೊಂದಾಗಿ ಬೆಳೆದ ಕಾರ್ಪೋರೇಷನ್ ಬ್ಯಾಂಕ್, ತನ್ನ 110 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ 2016ರಲ್ಲಿ ನಷ್ಟವನ್ನು ತೋರಿಸಿದ್ದು, ಶೇರುದಾರರಿಗೆ ಪ್ರಪ್ರಥಮ ಬಾರಿಗೆ ಡಿವಿಡೆಂಟ್‌ನ್ನು ನೀಡಲು ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಬ್ಯಾಂಕಿನ ಆಡಳಿತ ಮಂಡಳಿ ತೆಗೆದುಕೊಂಡಿದ್ದು ಅದಕ್ಕೆ ಬ್ಯಾಂಕಿನ ಸರ್ವಸದಸ್ಯರ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ. ಇದು ‘ದೇಹವನ್ನು ಬಾಧಿಸುವ ಶೀತವನ್ನು ಗುಣಪಡಿಸುವ ಬದಲು ಇಡೀ ಮೂಗನ್ನೇ ಕೊಯ್ದ’ ಕತೆಯಾಯಿತು ಎಂದು ಆಡಳಿತ ಮಂಡಳಿಯ ಈ ನಡೆಯನ್ನು ವಿರೋಧಿ ಸುತ್ತಿರುವ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗ್ರಾಹಕರು ವ್ಯಂಗ್ಯವಾಡಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಪೈಪೋಟಿ ನೀಡಲು, ಬ್ಯಾಂಕಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಇನ್ನಷ್ಟು ಪ್ರಗತಿ ಸಾಧಿಸಲು, ಜೊತೆಗೆ ಪ್ರತಿದಿನ ವೆಂಬಂತೆ ವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮಾಹಿತಿ ತಂತ್ರಜ್ಞಾನವನ್ನು ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳುವುದಕ್ಕೆ ಅನುಕೂಲವಾಗಲು ಈ ಸ್ಥಳಾಂತರ ಅನಿವಾರ್ಯವೆಂಬುದು ಆಡಳಿತ ಮಂಡಳಿಯ ಅಭಿಪ್ರಾಯ.

ಆದರೆ ಕಳೆದ 110 ವರ್ಷಗಳಲ್ಲಿ ಕರಾವಳಿಯಲ್ಲೇ ನಿಂತು ಪ್ರತಿ ವರ್ಷವೂ ಲಾಭವನ್ನು ಹೊಂದುತ್ತಿದ್ದ, ದೇಶದಲ್ಲೇ ಅತ್ಯಂತ ಶಿಸ್ತುಬದ್ಧ ಬ್ಯಾಂಕ್ ಎನಿಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ತ್ವರಿತಗತಿಯಲ್ಲಿ ಅಳವಡಿಸಿಕೊಂಡು ಹೊಸ ತಲೆಮಾರಿನ ಬ್ಯಾಂಕುಗಳಿಗೂ ಪೈಪೋಟಿ ನೀಡಿದ ಕಾರ್ಪೋರೇಷನ್ ಬ್ಯಾಂಕ್, ಬೆಂಗಳೂರಿಗೆ ತೆರಳಿದ ತಕ್ಷಣ ಲಾಭ ಗಳಿಸಲು ಸಾಧ್ಯವೇ ಎಂಬುದು ಗ್ರಾಹಕರು ಹಾಗೂ ಸಿಬ್ಬಂದಿಯ ಪ್ರಶ್ನೆಯಾಗಿದೆ.

ಇದಕ್ಕೆ ಈಗಾಗಲೇ ಬೆಂಗಳೂರಿಗೆ ತನ್ನ ಪ್ರಧಾನ ಕಚೇರಿಯನ್ನು ಸ್ಥಳಾಂತರಿಸಿ ರುವ ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕುಗಳ ಪ್ರಗತಿಯನ್ನು ಉದಾಹರಣೆಯಾಗಿ ನೀಡುತ್ತಾರೆ. ಇಷ್ಟು ವರ್ಷಗಳಲ್ಲಿ ಇವುಗಳಿಗಿಂತ ಕಾರ್ಪ್ ಬ್ಯಾಂಕಿನ ಸಾಧನೆಯೇ ಉತ್ತಮವಾಗಿತ್ತು. ಮಂಗಳೂರಿ ನಲ್ಲೇ ನಿಂತು ಉಳಿದ ಬ್ಯಾಂಕುಗಳಿಗೆ ಪೈಪೋಟಿ ನೀಡಲು ಹಾಗೂ ಲಾಭ ಗಳಿಸಲು ಸಾಧ್ಯ ಎಂಬುದನ್ನು ಕಾರ್ಪ್ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ತೋರಿಸಿಕೊಟ್ಟಿವೆ ಎಂದು ಬ್ಯಾಂಕಿನ ಹಲವು ದಶಕಗಳ ಗ್ರಾಹಕರು ಅಭಿಪ್ರಾಯ ಪಡುತ್ತಾರೆ.

ಇವುಗಳೊಂದಿಗೆ ಬ್ಯಾಂಕು ಮಂಗಳೂರಿನಲ್ಲಿ ಸ್ವಂತ ಜಾಗದಲ್ಲಿ ನೂರಾರು ಕೋಟಿ ರೂ.ಗಳ ಬಂಡವಾಳ ಹೂಡಿ ಅತ್ಯಾಧುನಿಕ, ಸುಸಜ್ಜಿತ ಪ್ರಧಾನ ಕಚೇರಿಯನ್ನು ಹೊಂದಿದೆ. ಇದನ್ನೆಲ್ಲಾ ತೊರೆದು ಬೆಂಗಳೂರಿನಲ್ಲಿ ಮತ್ತೆ ಹಲವು ಕೋಟಿ ರೂ.ಗಳನ್ನು ಬಳಸಿ ಪ್ರಧಾನ ಕಚೇರಿಯನ್ನು ನಿರ್ಮಿಸುವುದು ಯಾವುದೇ ಕಾರಣಕ್ಕೂ ‘ಬುದ್ಧಿವಂತ ನಿರ್ಧಾರ’ವಾಗಲು ಸಾಧ್ಯವಿಲ್ಲ. ಅದೂ ಮೊದಲ ಬಾರಿ ನಷ್ಟವನ್ನು ತೋರಿಸಿ, ಶೇರುದಾರರಿಗೆ ಡಿವಿಡೆಂಟ್ ನೀಡಲು ಅಸಮರ್ಥ ವಾದ ಆಡಳಿತ ಮಂಡಳಿಯ ನಿರ್ಧಾರ ಖಂಡಿತ ಸಮರ್ಥನೀಯವಲ್ಲ ಎಂದ ವರು ಹೇಳುತ್ತಾರೆ.

ಮಂಗಳೂರಿನ ಈಗಿನ ಮುಖ್ಯ ಕಚೇರಿಯನ್ನು ಬ್ಯಾಂಕಿನ ‘ತರಬೇತಿ ಕೇಂದ್ರ’ವಾಗಿ ಬಳಸಿಕೊಳ್ಳುವುದು, ಅಲ್ಲಿ ಹೂಡಿದ ಕೋಟ್ಯಾಂತರ ರೂ.ಗಳನ್ನು ‘ಡೆಡ್ ಇನ್‌ವೆಸ್ಟ್‌ಮೆಂಟ್’ ಮಾಡಿದಂತೆ. ಅದೂ ಅಲ್ಲದೇ ಕೇಂದ್ರ ಸರಕಾರ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಲು ತುದಿಗಾಲಲ್ಲಿ ನಿಂತಿರುವಾಗ -ಈಗಾಗಲೇ ಸ್ಟೇಟ್ ಬ್ಯಾಂಕುಗಳ ವಿಲೀನ ಮುಗಿದಿದೆ.- ಕಾರ್ಪೋರೇಷನ್ ಬ್ಯಾಂಕ್ ಆಡಳಿತ ಮಂಡಳಿಯಈ ನಿರ್ಧಾರ ಖಂಡಿತ ಪ್ರಶ್ನಾರ್ಹ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬೆಂಗಳೂರಿಗೆ ಹೋಲಿಸಿದರೆ, ಮಂಗಳೂರು ಈಗಲೂ ಕಡಿಮೆ ದುಬಾರಿ ನಗರ. ಅಲ್ಲದೇ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿಯಾಗಲು ಆಯ್ಕೆಯಾಗಿರುವ ಮಂಗಳೂರು, ರಾಜ್ಯದ ಎರಡನೇ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಇದನ್ನು ಬಿಟ್ಟು ಬೆಂಗಳೂರಿನತ್ತ ಮುಖಮಾಡುವ ನಿರ್ಧಾರದಿಂದ ಹಿಂದೆ ಸರಿಯುವುದು ಬ್ಯಾಂಕಿಗೆ ಭಾವನಾತ್ಮವಾಗಿಯೂ ಉತ್ತಮ ನಿರ್ಧಾರವೆನಿಸಿ ಕೊಳ್ಳುತ್ತದೆ ಎಂದು ಬ್ಯಾಂಕಿನ ಸಿಬ್ಬಂದಿ ಹಾಗೂ ಗ್ರಾಹಕರು ಹೇಳುತ್ತಾರೆ.

ಉಡುಪಿಯಿಂದ ಅಕಾಶದೆತ್ತರಕ್ಕೆ ಬೆಳೆದ ಬ್ಯಾಂಕು ಉಡುಪಿಯಲ್ಲಿ ಅಗರ್ಭ ಶ್ರೀಮಂತ ವರ್ತಕರಾಗಿದ್ದ ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ ಅವರು ತನ್ನ ಸ್ವಂತ ಮನೆಯ ಒಂದು ಕೋಣೆಯಲ್ಲಿ 12 ಮಂದಿ ನಿರ್ದೇಶಕರೊಂದಿಗೆ 1906ರ ಮಾ.16ರಂದು ಪ್ರಾರಂಭಿಸಿದ್ದ ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್ ಉಡುಪಿ ಲಿಮಿಟೆಡ್, 1939ರಲ್ಲಿ ದಿ ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್ ಲಿಮಿಟೆಡ್ ಎಂದು ಹೆಸರು ಬದಲಾಯಿಸಿಕೊಂಡಿತು.

1972ರಲ್ಲಿ ಎರಡನೇ ಬಾರಿಗೆ ಹೆಸರು ಬದಲಿಸಿಕೊಂಡು ‘ಕಾರ್ಪೋರೇಷನ್ ಬ್ಯಾಂಕ್ ಲಿಮಿಟೆಡ್’ ಆಯಿತು. 1980ರ ಎ.15ರಂದು ಉಳಿದ 19 ಬ್ಯಾಂಕುಗಳೊಂದಿಗೆ ಇದೂ ರಾಷ್ಟ್ರೀಕರಣ ಗೊಂಡಿದ್ದರಿಂದ ಅದರ ಹೆಸರಿನಲ್ಲಿದ್ದ ಲಿಮಿಟೆಡ್ ಹೋಗಿ ಇಂದಿನ ‘ಕಾರ್ಪೋರೇಷನ್ ಬ್ಯಾಂಕ್’ ಎಂಬ ಹೆಸರು ಬಂತು.

1906ರಲ್ಲಿ ಬ್ಯಾಂಕ್ ಸ್ಥಾಪನೆಗೊಂಡಾಗ ಇದರ ಮೂಲ ಬಂಡವಾಳ 5,000ರೂ. ಬ್ಯಾಂಕಿನ ಮೊದಲ ದಿನದ ವಹಿವಾಟು 38ರೂ.13 ಆಣೆ, 2ಪೈಸೆ. ಅದೇ ವರ್ಷ ಎ.5ರಂದು 100 ರೂ. ಸಾಲ ಪಡೆದ ಜನಾಬ್ ಶಿದ್ಲಿ ಬಾಪು ಸಾಹೇಬ್ ಬ್ಯಾಂಕಿನ ಮೊದಲ ಸಾಲಗಾರರಾಗಿ ಇತಿಹಾಸದಲ್ಲಿ ದಾಖಲಾದರು. ವ್ಯವಹಾರ ಆರಂಭಗೊಂಡು 9ತಿಂಗಳಲ್ಲಿ 258 ಮಂದಿ ಶೇರುದಾರರು 1017 ಶೇರುಗಳನ್ನು ಕೊಂಡರು. ಅ.13ರಂದು ವಕೀಲರಾದ ಬಿ.ನಾರಾಯಣ ರಾವ್ 100ರೂ.ಗಳ ಮೊದಲ ಠೇವಣಿ ಇಟ್ಟಿದ್ದರು.1914ರಲ್ಲಿ ಬ್ಯಾಂಕ್ ಸ್ವಂತ ಕಾರ್ಯಾಲಯಕ್ಕೆ ಸ್ಥಳಾಂತರಗೊಂಡಿತ್ತು.

ಕಾರ್ಪೋರೇಷನ್ ಬ್ಯಾಂಕ್ ಪ್ರಾರಂಭಗೊಂಡು 17 ವರ್ಷಗಳ ಬಳಿಕ ಮೊದಲ ಶಾಖೆ 1923ರಲ್ಲಿ ಕುಂದಾಪುರದಲ್ಲಿ ಪ್ರಾರಂಭಗೊಂಡಿತ್ತು. 1926ರಲ್ಲಿ ಮಂಗಳೂರು ಶಾಖೆ ಪ್ರಾರಂಭವಾಯಿತು. 110 ವರ್ಷಗಳ ಬಳಿಕ ಈಗ 2300 ಶಾಖೆಗಳನ್ನು, 3040 ಎಟಿಎಂಗಳನ್ನು ಹಾಗೂ 246 ಇ-ಲಾಬಿ ಗಳನ್ನು ಹೊಂದಿದೆ.

ಲಾಭದಿಂದ ನಷ್ಟಕ್ಕೆ

ಕಾರ್ಪ್ ಬ್ಯಾಂಕ್ ಸ್ಥಾಪನೆಗೊಂಡ 110 ವರ್ಷಗಳಲ್ಲಿ ಸತತವಾಗಿ ಲಾಭ ಗಳಿಸುತ್ತಾ ಬಂದಿದೆ. 2009-10ನೇ ಸಾಲಿನಲ್ಲಿ ಬ್ಯಾಂಕಿನ ನಿವ್ವಳ ಲಾಭ 1170ಕೋಟಿ ರೂ.ಗಳಾದರೆ, 2010-11ರಲ್ಲಿ 1413.27, 2011-12ರಲ್ಲಿ 1506.04, 2012-13ರಲ್ಲಿ 1434.67 ಕೋಟಿ ರೂ.ಗಳ ಲಾಭ ದಾಖಲಿಸಿತ್ತು. ಈ ಬಳಿಕ ಇಳಿದ ಲಾಭ ಪ್ರಮಾಣ 1014-15ನೇ ಸಾಲಿನಲ್ಲಿ 584.26 ಕೋಟಿ ರೂ.ಗಳಾಗಿತ್ತು. ಆದರೆ ಈ ವರ್ಷ ಮೊದಲ ಬಾರಿ 506.48 ಕೋಟಿ ರೂ. ನಷ್ಟವನ್ನು ತೋರಿಸಲಾಗಿದೆ. ಹೀಗಾಗಿ ಈ ಬಾರಿ ಶೇರುದಾರರಿಗೆ ಡಿವಿಡೆಂಡ್‌ನ್ನು ಘೋಷಿಸಿಲ್ಲ.

share
ಬಿ.ಬಿ. ಶೆಟ್ಟಿಗಾರ್
ಬಿ.ಬಿ. ಶೆಟ್ಟಿಗಾರ್
Next Story
X