ಸೀಮಿತ ಕಾರ್ಯಾಚರಣೆ: ಶಾಸಕ ಮೊಯ್ದಿನ್ ಬಾವರಿಂದ ಸಂಭ್ರಮಾಚರಣೆ

ಮಂಗಳೂರು, ಅ.1: ಭಾರತ-ಪಾಕ್ ನಡುವಿನ ಗಡಿನಿಯಂತ್ರಣಾ ರೇಖೆಯನ್ನು ದಾಟಿ ಭಾರತೀಯ ಯೋಧರು ನಡೆಸಿದ ಸೀಮಿತ ಕಾರ್ಯಾಚರಣೆಗೆ ಶಾಸಕ ಮೊಯ್ದೀನ್ ಬಾವ ಸಂತಸ ವ್ಯಕ್ತಪಡಿಸಿದ್ದಾರೆ.
ಉಗ್ರರನ್ನು ಸದೆಬಡಿದ ಭಾರತೀಯ ಯೋಧರ ಸಾಹಸವನ್ನು ಶ್ಲಾಘಿಸಿದ ಮೊಯ್ದಿನ್ ಬಾವ ಅವರು ಸಿಹಿಹಂಚಿ ಸಂಭ್ರಮಿಸಿದರು. ಕದ್ರಿ ಯುದ್ಧ ಸ್ಮಾರಕದ ಬಳಿ ಯೋಧರಿಗೆ ಗೌರವ ಸಮರ್ಪಿಸಿದ ಬಳಿಕ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
Next Story





