ದೇಶದ ಅತೀ ದೊಡ್ಡ ತರಂಗಗುಚ್ಛ ಹರಾಜು ಪ್ರಕ್ರಿಯೆಗೆ ಚಾಲನೆ
ಹೊಸದಿಲ್ಲಿ, ಅ.1: ದೇಶದ ಅತೀ ದೊಡ್ಡ ತರಂಗಾಂತರ ಗುಚ್ಛ ಹರಾಜು ಪ್ರಕ್ರಿಯೆ ಎನ್ನಲಾದ 5.63 ಲಕ್ಷ ಕೋಟಿ ವೌಲ್ಯದ ಮೊಬೈಲ್ ತರಂಗಗುಚ್ಛಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಿಲಯನ್ಸ್ ಜಿಯೊ, ವೊಡಫೋನ್, ಐಡಿಯಾ ಸೆಲ್ಯೂಲರ್ ಮತ್ತು ಭಾರ್ತಿ ಏರ್‌ಟೆಲ್ , ಟಾಟಾ ಟೆಲಿಸರ್ವಿಸಸ್, ರಿಲಯನ್ಸ್ ಕಮ್ಯುನಿಕೇಷನ್, ಏರ್‌ಸೆಲ್ ಸೇರಿದಂತೆ ಪ್ರಮುಖ ಮೊಬೈಲ್ ಸಂಸ್ಥೆಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ.
ಹರಾಜು ಕೂಗಲು ಯಾವುದೇ ಅಂತ್ಯಮಿತಿಯನ್ನು ಸರಕಾರ ಸೂಚಿಸಿಲ್ಲ. ಪ್ರತೀದಿನ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಬಿಡ್ಡಿಂಗ್ ಸಮಯವಾಗಿದೆ. 2010ರಲ್ಲಿ ನಡೆಸಲಾದ 3ಜಿ ತರಂಗಾಂತರ ಗುಚ್ಛಗಳ ಹರಾಜು ಪ್ರಕ್ರಿಯೆ 34 ದಿನ ನಡೆದಿತ್ತು.
Next Story





