ಭುವಿ ದಾಳಿಗೆ ತತ್ತರಿಸಿದ ಕಿವೀಸ್
ಎರಡನೆ ಟೆಸ್ಟ್: ಭಾರತ ಮೇಲುಗೈ

ಕೋಲ್ಕತಾ, ಅ.1: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ವೇಗಿ ಭುವನೇಶ್ವರ ಕುಮಾರ್ ದಾಳಿಗೆ ನ್ಯೂಝಿಲೆಂಡ್ ತತ್ತರಿಸಿದೆ. ಎರಡನೆ ದಿನದಾಟದಂತ್ಯಕ್ಕೆ ನ್ಯೂಝಿಲೆಂಡ್ 34 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಿದೆ. ಎರಡನೆ ದಿನದ ಆಟ ನಿಂತಾಗ ನ್ಯೂಝಿಲೆಂಡ್‌ನ ವಿಕೆಟ್ ಕೀಪರ್ ಬಿಜೆ ವ್ಯಾಟ್ಲಿಂಗ್ 12 ರನ್ ಮತ್ತು ಜೀತನ್ ಪಟೇಲ್ 5ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಭಾರತದ ಭುವನೇಶ್ವರ ಕುಮಾರ್(33ಕ್ಕೆ5) , ಮುಹಮ್ಮದ್ ಶಮಿ(46ಕ್ಕೆ 1) ಮತ್ತು ರವೀಂದ್ರ ಜಡೇಜ (17ಕ್ಕೆ1) ದಾಳಿಯನ್ನು ಎದುರಿಸಲು ಪರದಾಡಿದ ನ್ಯೂಝಿಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.
ಇತ್ತೀಚಿನ ದಿನಗಳಲ್ಲಿ ತವರ ಸರಣಿಯಲ್ಲಿ ಭಾರತದ ವೇಗದ ಬೌಲರ್‌ಗಳು ಅಷ್ಟೇನೂ ಮಿಂಚುತ್ತಿರಲಿಲ್ಲ.ಸ್ಪಿನ್ನರ್‌ಗಳೇ ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡುತ್ತಿದ್ದರು. ಆದರೆ ಎರಡನೆ ಟೆಸ್ಟ್‌ನಲ್ಲಿ ಭಾರತದ ಪತನಗೊಂಡ ನ್ಯೂಝಿಲೆಂಡ್‌ನ ಏಳು ವಿಕೆಟ್‌ಗಳಲ್ಲಿ 6ನ್ನು ವೇಗದ ಬೌಲರ್‌ಗಳು ಹಂಚಿಕೊಂಡಿದ್ದಾರೆ. ಈ ವೇಳೆಸ್ಪಿನ್ನರ್ ಜಡೇಜಗೆ ಒಂದು ವಿಕೆಟ್ ಸಿಕ್ಕಿದೆ. ವೇಗದ ಬೌಲರ್‌ಗಳ ಸ್ನೇಹಿಯಾಗಿರುವ ಕೋಲ್ಕತಾ ಪಿಚ್‌ನಲ್ಲಿ ವೇಗಿ ಭುವನೇಶ್ವರ ಕುಮಾರ್ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಭುವನೇಶ್ವರ ದಾಳಿಯ ಮುಂದೆ ನ್ಯೂಝಿಲೆಂಡ್‌ನ ದಾಂಡಿಗರಿಗೆ ದೊಡ್ಡ ಮೊತ್ತದ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಂಗಾಮಿ ನಾಯಕ ರಾಸ್ ಟೇಲರ್ 36 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ಮಳೆಯಿಂದ ಇಂದಿನ ಆಟಕ್ಕೆ ಅಡಚಣೆ ಉಂಟಾಗಿತ್ತು. ಒಂದೂವರೆ ಗಂಟೆ ಆಟ ಮಳೆಯಿಂದಾಗಿ ನಡೆಯಲಿಲ್ಲ.
ಹಂಗಾಮಿ ನಾಯಕ ರಾಸ್ ಟೇಲರ್ ಅವರನ್ನು ಹೊರತುಪಡಿಸಿದರೆ ಲ್ಯುಕ್ ರೊಂಚಿ (35) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಮಾರ್ಟಿನ್ ಗಪ್ಟಿಲ್ ಮತ್ತು ಲಥಾಮ್ ನ್ಯೂಝಿಲೆಂಡ್‌ನ ಇನಿಂಗ್ಸ್ ಆರಂಭಿಸಿದ್ದರು. ಭುವನೇಶ್ವರ ಕುಮಾರ್ ಅವರ ಮೊದಲ ಓವರ್‌ನಲ್ಲಿ ಗಪ್ಟಿಲ್ ಎರಡು ಬೌಂಡರಿ ಬಾರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ ಎರಡನೆ ಓವರ್‌ನ ಐದನೆ ಎಸೆತದಲ್ಲಿ ಮುಹಮ್ಮದ್ ಶಮಿ ಅವರು ಲಥಾಮ್(1)ರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿದರು.
ತಂಡದ ಸ್ಕೋರ್ 18 ತಲುಪುವಾಗ ನ್ಯೂಝಿಲೆಂಡ್‌ಗೆ ಇನ್ನೊಂದು ಆಘಾತ ಮಾರ್ಟಿನ್ ಗಪ್ಟಿಲ್(13) ಅವರು ಭುವನೇಶ್ವರ ಕುಮಾರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಐದು ರನ್ ಸೇರುವಷ್ಟರಲ್ಲಿ ಇನ್ನೊಂದು ವಿಕೆಟ್ ಪತನ. ಕುಮಾರ್ ಎಸೆತದಲ್ಲಿ ನಿಕೋಲಾಸ್(1) ಬೌಲ್ಡ್. 6.4 ಓವರ್‌ಗಳಲ್ಲಿ 23ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್‌ಗೆ ನಾಯಕ ರಾಸ್ ಟೇಲರ್ ಮತ್ತು ಲ್ಯೂಕ್ ರೊಂಚಿ ಆಸರೆ ನೀಡುವ ಪ್ರಯತ್ನ ಕೈಗೊಂಡರು. ಇವರ ಜೊತೆಯಾಟದಲ್ಲಿ 62 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. 24.4 ಓವರ್‌ಗಳಲ್ಲಿ ತಂಡದ ಮೊತ್ತ 85ಕ್ಕೆ ತಲುಪಿತು. ರೊಂಚಿ ಅವರನ್ನು ಸ್ಪಿನ್ನರ್ ರವೀಂದ್ರ ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.52 ಎಸೆತಗಳನ್ನು ಎದುರಿಸಿದ ರೊಂಚಿ 5 ಬೌಂಡರಿಗಳ ಸಹಾಯದಿಂದ 35 ರನ್ ದಾಖಲಿಸಿದರು.
ಟೇಲರ್ ತಂಡದ ಮೊತ್ತ 100ರ ಗಡಿ ದಾಟುವ ತನಕ ನಿಂತರು. ಅವರು 80 ಎಸೆತಗಳನ್ನು ಎದುರಿಸಿದರು. 5 ಬೌಂಡರಿ ಸಹಾಯದಿಂದ 36 ರನ್ ದಾಖಲಿಸಿದರು.
ಸ್ಯಾಂಟ್ನೆರ್ 11ರನ್ ಮತ್ತು ಹೆನ್ರಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.
ಭಾರತ 316: ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 104.5 ಓವರ್‌ಗಳಲ್ಲಿ 316 ರನ್‌ಗಳಿಗೆ ಆಲೌಟಾಗಿತ್ತು. ಮೊದಲ ದಿನದಾಟದ ಅಂತ್ಯಕ್ಕೆ 14 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ವೃದ್ಧಿಮಾನ್ ಸಹಾ ಮತ್ತು ಖಾತೆ ತೆರೆಯದ ರವೀಂದ್ರ ಜಡೇಜ ಬ್ಯಾಟಿಂಗ್ ಮುಂದುವರಿಸಿ ಎಂಟನೆ ವಿಕೆಟ್‌ಗೆ 41 ರನ್ ಸೇರಿಸಿದರು. ಸಹಾ ಅಜೇಯ 54 ರನ್ ಗಳಿಸಿದರು. ಸಹಾ ಅವರು 78 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು.
ರವೀಂದ್ರ ಜಡೆಜ 14 ರನ್, ಭುವನೇಶ್ವರ ಕುಮಾರ್ 5 ರನ್ ಮತ್ತು ಮುಹಮ್ಮದ್ ಶಮಿ 14 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ಸಹಾಯ ಮಾಡಿದರು.
ನ್ಯೂಝಿಲೆಂಡ್‌ನ ಹೆನ್ರಿ 46ಕ್ಕೆ 3, ಬೌಲ್ಟ್ , ವ್ಯಾಗ್ನೆರ್ ಮತ್ತು ಜೆ.ಎಸ್ ಪಟೇಲ್ ತಲಾ 2 ವಿಕೆಟ್, ಸ್ಯಾಂಟ್ನೆರ್ 1 ವಿಕೆಟ್ ಹಂಚಿಕೊಂಡರು.
,,,,,,,,,,,,
ಸ್ಕೋರ್ ಪಟ್ಟಿ
ಭಾರತ 104.5 ಓವರ್‌ಗಳಲ್ಲಿ ಆಲೌಟ್ 316
ಶಿಖರ್ ಧವನ್ ಬಿ ಹೆನ್ರಿ01
ವಿಜಯ್ ಸಿ ವ್ಯಾಟ್ಲಿಂಗ್ ಬಿ ಹೆನ್ರಿ 09
ಸಿ. ಪೂಜಾರ ಸಿ ಗಪ್ಟಿಲ್ ಬಿ ವ್ಯಾಗ್ನೆರ್87
ಕೊಹ್ಲಿ ಸಿ ಲಥಾಮ್ ಬಿ ಬೌಲ್ಟ್09
ರಹಾನೆ ಎಲ್‌ಬಿಡಬ್ಲು ಬಿ ಪಟೇಲ್77
ರೋಹಿತ್ ಸಿ ಲಥಾಮ್ ಬಿ ಪಟೇಲ್02
ಅಶ್ವಿನ್ ಎಲ್‌ಬಿಡಬ್ಲು ಬಿ ಹೆನ್ರಿ 26
ವೃದ್ದಿಮಾನ್ ಸಹಾ ಔಟಾಗದೆ54
ಜಡೇಜ ಸಿ ಹೆನ್ರಿ ಬಿ ವ್ಯಾಗ್ನೆರ್14
ಬಿ.ಕುಮಾರ್ ಎಲ್‌ಬಿಡಬ್ಲು ಬಿ ಸ್ಯಾಂಟ್ನೆರ್ 05
ಎಂ.ಶಮಿ ಸಿ ಹೆನ್ರಿ ಬಿ ಬೌಲ್ಟ್ 14
ಇತರ18
ವಿಕೆಟ್ ಪತನ: 1-1, 2-28, 3-46, 4-187, 5-193, 6-200, 7-231, 8-272, 9-281, 10-316
ಬೌಲಿಂಗ್ ವಿವರ
ಬೌಲ್ಟ್20.5-9-46-2
ಹೆನ್ರಿ20.0-6-46-3
ವ್ಯಾಗ್ನೆರ್20.0-5-57-2
ಸ್ಯಾಂಟ್ನೆರ್23.0-5-83-1
ಜೀತನ್ ಪಟೇಲ್21.0-3-66-2
ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 34 ಓವರ್‌ಗಳಲ್ಲಿ 128/7
ಗಪ್ಟಿಲ್ ಬಿ ಕುಮಾರ್13
ಲಥಾಮ್ ಎಲ್‌ಬಿಡಬ್ಲು ಬಿ ಶಮಿ01
ನಿಕೊಲಾಸ್ ಬಿ ಕುಮಾರ್01
ಟೇಲರ್ ಸಿ ವಿಜಯ್ ಬಿ ಕುಮಾರ್36
ರೊಂಚಿ ಎಲ್‌ಬಿಡಬ್ಲು ಬಿ ಜಡೇಜ35
ಸ್ಯಾಂಟ್ನೆರ್ ಎಲ್‌ಬಿಡಬ್ಲು ಬಿ ಕುಮಾರ್11
ವಾಟ್ಲಿಂಗ್ ಔಟಾಗದೆ12
ಹೆನ್ರಿ ಬಿ ಕುಮಾರ್00
ಜೀತನ್ ಪಟೇಲ್ ಔಟಾಗದೆ 05
ಇತರ14
ವಿಕೆಟ್ ಪತನ: 1-10, 2-18, 3-23, 4-85, 5-104, 6-122, 7-122
ಬೌಲಿಂಗ್ ವಿವರ
ಬಿ.ಕುಮಾರ್10.0-0-33-5
ಎಂ.ಶಮಿ11.0-0-46-1
ಜಡೇಜ08.0-3-17-1
ಆರ್.ಅಶ್ವಿನ್05.0-2-23-0







