varthabharati.in ಹೆಸರು ದುರ್ಬಳಕೆ ಮಾಡಿ ಸುಳ್ಳುಸುದ್ದಿ ಪ್ರಚಾರ: ಇಬ್ಬರ ಬಂಧನ

ಮಂಗಳೂರು, ಅ.1: ‘varthabharti.in'ನಲ್ಲಿ ಪ್ರಕಟಗೊಂಡ ಸುದ್ದಿಯ ತಲೆಬರಹವನ್ನು ಬದಲಾಯಿಸಿ ಸಳ್ಳು ಸುದ್ದಿ ಹಬ್ಬಿಸಿದ್ದ ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ತಾಲೂಕಿನ ಮುದ್ದೋಡಿ ನಿವಾಸಿ ಜುನೈದ್ ಎಸ್. (36) ಮತ್ತು ಚಿಕ್ಕಮಡ್ನೂರು ನಿವಾಸಿ ಅಬೂಬಕರ್ ಸಿದ್ದೀಕ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳು ಸೆ.24ರಂದು ‘varthabharti.in' ನಲ್ಲಿ ಬಂದ ಸುದ್ದಿಯೊಂದರ ತಲೆಬರೆಹವನ್ನು ಬದಲಾಯಿಸಿ ವಾಟ್‌ಆ್ಯಪ್‌ನಲ್ಲಿ ಹಾಕಿ ಶೇರ್ ಮಾಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಅದರಂತೆ ಪೊಲೀಸರು ಆರೋಪಿಗಳನ್ನು ಇಂದು ಮಧ್ಯಾಹ್ನ 12:15ಕ್ಕೆ ಪುತ್ತೂರಿನ ಅರುಣಾ ಥಿಯೇಟರ್ ಬಳಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
Next Story





