ಜಯಲಲಿತಾ ಚೇತರಿಕೆ: ಎಡಿಎಂಕೆ
ಚೆನ್ನೈ, ಅ.1: ಮುಖ್ಯಮಂತ್ರಿ ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದು ಅವರ ಫೋಟೊ ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂದು ಎಡಿಎಂಕೆ ತಿಳಿಸಿದೆ. ಜಯಲಲಿತಾ ಆರೋಗ್ಯದ ಕುರಿತಾಗಿ ಹಬ್ಬುತ್ತಿರುವ ಗಾಳಿಸುದ್ದಿಗಳನ್ನು ಪಕ್ಷ ತಳ್ಳಿಹಾಕಿದೆ.
ಬ್ರಿಟಿಷ್ ವೈದ್ಯ ಡಾ. ರಿಚರ್ಡ್ ಜಾನ್ ಬಿಲೆ ಅವರು ಜಯಲಲಿತಾರ ಚಿಕಿತ್ಸೆಗೆ ಸಲಹೆ ನೀಡುತ್ತಿದ್ದು, ಮುಖ್ಯಮಂತ್ರಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಅವರು ಆಸ್ಪತ್ರೆಯಲ್ಲಿರುವ ಫೋಟೊ ಬಿಡುಗಡೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಜಯಲಲಿತಾ ಜನತೆಗೆ ಉತ್ತರಿಸಬೇಕು. ವಿರೋಧ ಪಕ್ಷಗಳಿಗಲ ್ಲ ಎಂದು ಪಕ್ಷ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಲಂಡನ್‌ನ ಬ್ರಿಗೇಡ್ ಆಸ್ಪತ್ರೆಯ ತಜ್ಞ ವೈದ್ಯರಾಗಿರುವ ಡಾ. ರಿಚರ್ಡ್ ಹೇಳಿಕೆ ನೀಡಿ, ಮುಂದಿನ ಕೆಲ ದಿನಗಳ ಕಾಲ ತಾನು ಇಲ್ಲೇ ಉಳಿದು ಚಿಕಿತ್ಸೆಗೆ ಸಲಹೆ ನೀಡುತ್ತೇನೆ ಎಂದಿದ್ದಾರೆ.
Next Story





