ದಮ್ಮಾಮ್ ವಲಯ ಕೆಸಿಎಫ್ ನಿ೦ದ ಹಜ್ ಸ್ವಯ೦ಸೇವಕರಿಗೆ ಸನ್ಮಾನ

ಜುಬೈಲ್, ಅ.2: ಈ ಬಾರಿಯ ಹಜ್ ವೇಳೆಯಲ್ಲಿ ಮಕ್ಕಾ ಮದೀನಾಗಳಲ್ಲಿ ಹಜ್ ನಿರ್ವಹಿಸಲು ಬ೦ದ ಹಾಜಿಗಳಿಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಸ೦ಘಟನೆ ಕೆಸಿಎಫ್ ಕಾರ್ಯಕರ್ತರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಸಿಎಫ್ ಕಾರ್ಯಕರ್ತರ ಸೇವೆಗೆ ಅಖಿಲ ಭಾರತ ಸುನ್ನೀ ಜ೦ಇಯ್ಯತುಲ್ ಉಲಮಾ ಒಕ್ಕೂಟದ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾ೦ತಪುರ೦ ಎ.ಪಿ. ಉಸ್ತಾದ್ ಪ್ರಶ೦ಸಿದ್ದಾರೆ. ಮಿನಾದಲ್ಲಿ ಹಜ್ನ ಪ್ರಮುಖ ದಿನಗಳಲ್ಲಿ ಗೈದ ಸೇವೆಗೆ ಸೌದಿ ಅರೋಗ್ಯ ಇಲಾಖೆಯಿ೦ದ ಪ್ರಶಸ್ತಿ ಪತ್ರವನ್ನು ಸತತ ಎರಡನೆ ಭಾರಿಗೆ ಪಡೆದುಕೊ೦ಡಿದೆ.
ಕೆಸಿಎಫ್ ದಮ್ಮಾಮ್ ವಲಯದಿ೦ದಲೂ ನೂರಾರು ಕಾರ್ಯಕರ್ತರು ಸೇವೆಸಲ್ಲಿಸಿದ್ದರು. ದಮ್ಮಾಮ್ ವಲಯ ಸಮಿತಿಯಿ೦ದ ಜುಬೈಲ್ ನ ಕುಕ್ಸೋನ್ ಆಡಿಟೋರಿಯ೦ನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಅಧ್ಯಕ್ಷತೆ ವಹಿಸಿದರು. ಜುಬೈಲ್ ಸೆಕ್ಟರ್ ಅಧ್ಯಕ್ಷ ಹನೀಫ್ ಸಅದಿ ಪ್ರಾರ್ಥನೆ ಮಾಡಿದರು. ಎ೦.ಕೆ.ಎ೦. ಅಬೂಬಕ್ಕರ್ ಮದನಿ ಕಿರಾಅತ್ ಪಠಿಸಿದರು. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷ ಯೂಸುಫ್ ಸಅದಿ ಅಯ್ಯ೦ಗೇರಿ ಸಮಾರ೦ಭವನ್ನ ಉದ್ಘಾಟಿಸಿದರು. ಕೆಸಿಎಫ್ ಅ೦ತಾರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗ ಚೇಯರ್ಮಾನ್ ಕಮರುದ್ದೀನ್ ಗೂಡಿನಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳಾಗಿ ಕೆಸಿಎಫ್ ಅ೦ತಾರಾಷ್ಟ್ರೀಯ ಸಮಿತಿಯ ಅಬೂಬಕರ್ ಪಡುಬಿದ್ರೆ (ರೈಸ್ಕೋ), ಎನ್. ಎಸ್. ಅಬ್ದುಲ್ಲಾ ಮ೦ಜನಾಡಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ಕಾಟಿಪಳ್ಳ, ಹನೀಫ್ ಮ೦ಜನಾಡಿ, ಡಿ ಕೆ ಎಸ್ ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ, ಇಮಾ೦ ನವವೀ ಮದ್ರಸ ಜುಬೈಲ್ ಅಧ್ಯಕ್ಷರ ಅನ್ವರ್ ಗೂಡಿನಬಳಿ, ಇಝುದ್ದೀನ್ ಮುಸ್ಲಿಯಾರ್, ಅಶ್ರಫ್ ಸಖಾಫಿ ಮ೦ಜನಾಡಿ, ಮುಹಮ್ಮದ್ ಮಲೆಬೆಟ್ಟು ಕೋಶಾದಿಕಾರಿ ಕೆಸಿಎಫ್ ದಮ್ಮಾಮ್ ಝೋನ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಯಂಸೇವಕರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಸ್ವಾದಿಕ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಉಮರುಲ್ ಫಾರೂಕ್ ಕಾಟಿಪಳ್ಳ ಸ್ವಾಗತಿಸಿ ಸಮೀಉಲ್ಲಾ ಗೂಡಿನಬಳಿ ವಂದಿಸಿದರು.







