ದೇಶದಾದ್ಯಂತ ಸಂಭ್ರಮದ ಗಾಂಧಿ ಜಯಂತಿ;ರಾಷ್ಟ್ರಪಿತ , ಶಾಸ್ತ್ರಿ ಸಮಾಧಿಗೆ ಪ್ರಧಾನಿ ಮೋದಿ ನಮನ

ಹೊಸದಿಲ್ಲಿ,ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 147ನೆ ಜಯಂತಿ ಅಂಗವಾಗಿ ರವಿವಾರ ದೇಶದೆಲ್ಲಡೆ ರಾಷ್ಟ್ರಪಿತನ ಸ್ಮರಣೆಯನ್ನು ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಜಘಾಟ್‌ನಲ್ಲಿರುವ ಗಾಂಧಿ ಸ್ಮಾರಕ ಹಾಗೂ ವಿಜಯ್ ಘಾಟ್‌ನಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಪ್ರಧಾನಿ ಮೋದಿಗೆ ಸಾಥ್ ನೀಡಿದರು.
Next Story





